ಸ್ವಂತ ಲಾಭಕ್ಕಾಗಿ ಸದನದ ದುರ್ಬಳಕೆ

0
8

ಉಡುಪಿ: ಮಹುವಾ ಮೊಯಿತ್ರಾ ಸಂಸದರು ಎನ್ನುವ ಪದಕ್ಕೆ ಕಳಂಕ ತಂದಿದ್ದು, ಸಂಸತ್ತಿನ ಪಾವಿತ್ರತೆ ಕಡೆಗಣಿಸಿದ್ದಕ್ಕೆ ಶಿಕ್ಷೆ ಆಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹುವಾ ಪವಿತ್ರವಾದ ಸದನವನ್ನು ಮತ್ತು ತಮ್ಮ ಸ್ಥಾನವನ್ನು ಸ್ವಂತ ಲಾಭಕ್ಕಾಗಿ ಸಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದರು.
ಸದನದಲ್ಲಿ ನಾವು ಕೇಳುವ ಪ್ರಶ್ನೆಗಳನ್ನು ಗುಪ್ತವಾಗಿ ಇಡಬೇಕು. ಪಾರ್ಲಿಮೆಂಟ್‌ನ ಒಳಗೆ ಬರುವ ತನಕ ಉತ್ತರ ಯಾರಿಗೂ ಗೊತ್ತಾಗುವುದಿಲ್ಲ. ನಮ್ಮ ಒಂದು ಪ್ರಶ್ನೆಗೆ 15-20 ದಿನ ಅಧಿಕಾರಿ ಶ್ರಮಪಡುತ್ತಾರೆ.
ಆದರೆ ಮಹುವಾ ಸಂಸತ್ತಿನಲ್ಲಿ ಪ್ರಶ್ನೆ ಕೇಳುವುದಕ್ಕೆ ಭ್ರಷ್ಟಾಚಾರ ಮಾಡಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಎಂದರು.

Previous articleಸದಾಶಿವ ಎಸ್ ಶೆಟ್ಟರ್ ಪ್ರತಿಮೆಗೆ ಗಣ್ಯರಿಂದ ಮಾಲಾರ್ಪಣೆ
Next articleಯತ್ನಾಳ ಆರೋಪದ ಬಗ್ಗೆ ತನಿಖೆ ಶೀಘ್ರ