ಹುಬ್ಬಳ್ಳಿ : ಸುಮಲತಾ ಅವರು ಮಂಡ್ಯ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿ ಸ್ಪರ್ಧಿಸಿ ಸಂಸದರಾದವರು. ಅವರು ಪಕ್ಷೇತರರಾಗಿಯೇ ಇದ್ದಾರೆ. ಅವರೇನಾದರೂ ಬಿಜೆಪಿ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರಾ ? ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಯಾವ ಪಕ್ಷದಲ್ಲಿದ್ದಾರೆ. ಯಾವ ಪಕ್ಷದಲ್ಲೂ ಇಲ್ಲಾರಿ ಎಂದರು. ಮಂಡ್ಯ ಕ್ಷೇತ್ರ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಬೇಕು ಎಂದು ಬಿಜೆಪಿಗೆ ಕೇಳಿದ್ದೇವೆ. ಉಭಯ ಪಕ್ಷದ ಉನ್ನತ ನಾಯಕರ ಮಟ್ಟದಲ್ಲಿ ಮಾತುಕತೆಯಾಗಿ ಮಂಡ್ಯ ಕ್ಷೇತ್ರ ಬಿಜೆಪಿಗೆ ಬಿಟ್ಟುಕೊಡುವ ನಿರ್ಧಾರ ಆದರೆ ಒಪ್ಪಿಕೊಳ್ಳಬೇಕಾಗುತ್ತದೆ. ಸುಮಲತಾ ಅವರೇ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ನಮ್ಮದೇನೂ ಅಭ್ಯಂತರವಿಲ್ಲ ಎಂದು ಜಿಟಿಡಿ ಹೇಳಿದರು.