ಸಂಕ್ಲಾಪೂರ ಗ್ರಾಮದಲ್ಲಿ ವಾಂತಿಬೇಧಿ ಪ್ರಕರಣ :೧೪ ಜನ ಆಸ್ಪತ್ರೆಗೆ ದಾಖಲು

0
26

ಇಳಕಲ್ : ತಾಲೂಕಿನ ಸಂಕ್ಲಾಪೂರ ಗ್ರಾಮದಲ್ಲಿ ಹದಿನಾಲ್ಕು ಜನರು ವಾಂತಿ ಬೇಧಿ ಪ್ರಕರಣಕ್ಕೆ ಸಿಲುಕಿದ್ದಾರೆ. ಅದರಲ್ಲಿ ಎಂಟು ಜನರನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಉಳಿದ ಆರು ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದು ಅದರಲ್ಲಿಯೂ ಮತ್ತಿಬ್ಬರ ಸ್ಥಿತಿ ಹದಗೆಟ್ಟ ಕಾರಣ ಅವರನ್ನೂ ಬಾಗಲಕೋಟೆ ಆಸ್ಪತ್ರೆಗೆ ಕಳಿಸುವ ಚಿಂತನೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದಾರೆ
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಚೇತನಾ ಶ್ಯಾವಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಬಗ್ಗೆ ಮೇಲಾಧಿಕಾರಿಗಳ ಜೊತೆಗೆ ಚರ್ಚೆ ಮಾಡಲಾಗಿದ್ದು ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಕುಡಿಯುವ ನೀರಿನ ದೋಷದಿಂದಾಗಿ ಇಂತಹ ಪ್ರಕರಣ ನಡೆದಿರಬಹುದು ಎಂದು ಶಂಕಿಸಲಾಗಿದೆ.

Previous articleಶ್ರೇಷ್ಠ ಭಾರತ ನಿರ್ಮಾಣಕ್ಕೆ ಕರೆ
Next articleಬೆಳಗಾವಿಯಲ್ಲಿ ಪರಿಸರ ದಿನಾಚರಣೆ