ಶ್ರೀಗಂಧದ ಮರ ಕಡಿದು ಮಾರಾಟ ಮಾಡುತ್ತಿದ್ದ ನಾಲ್ವರು ಕಳ್ಳರು ಪೊಲೀಸ್ ವಶಕ್ಕೆ

0
22

ಕುಷ್ಟಗಿ: ರೈತರ ಜಮೀನಿನಲ್ಲಿ ಬೆಳೆಯಲಾಗಿದ್ದ ಶ್ರೀಗಂಧ ಮರವನ್ನು ರಾತ್ರಿ ಸಮಯದಲ್ಲಿ ಕಡೆದು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಎಂಟು ಜನ ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸುವಲ್ಲಿ ಕುಷ್ಟಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಣಗೇರಿ ಗ್ರಾಮದ ರಾಜಪ್ಪ ಹನುಮಪ್ಪ ಭಜಂತ್ರಿ(45), ಶಿವಪ್ಪ ಲಕ್ಷ್ಮಣ ಭಜಂತ್ರಿ(33), ದೋಟಿಹಾಳ ಗ್ರಾಮದ ಆರೋಪಿ ಹನಮಂತಪ್ಪ ಬಸಪ್ಪ ಜುಮಲಾಪುರ(೫೪), ಕಾರಜೋಳ ಗ್ರಾಮದ ಶಶಿಕುಮಾರ ಚನ್ನಪ್ಪ ರೂಡಗಿ(೨೪) ಬಂಧಿತ ಆರೋಪಿಗಳು.
ತಾಲೂಕಿನ ಕುಷ್ಟಗಿ, ಹನುಮಸಾಗರ, ತಾವರಗೇರಾ ಹಾಗೂ ಕನಕಗಿರಿ, ನವಲಿ ವ್ಯಾಪ್ತಿಯಲ್ಲಿ ಬರುವ ರೈತರ ಜಮೀನುಗಳಲ್ಲಿ ಬೆಳೆಯಲಾಗಿದ್ದ ೪೦ ಕೆಜಿ ಶ್ರೀಗಂಧದ ಮರದ ಜೊತೆಗೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Previous articleವಿಶೇಷ ರೈಲುಗಳ ಅವಧಿ ವಿಸ್ತರಣೆ
Next articleಹು-ಧಾ ಮೇಯರ್ ಆಗಿ ವೀಣಾ ಆಯ್ಕೆ: ಬಾಗಲಕೋಟೆಯಲ್ಲಿ ಸಂತಸ