ವ್ಯಾಪಾರಿಯನ್ನ ಬೆತ್ತಲೆ ಮಾಡಿ ಹಲ್ಲೆ

0
45

ಕಲಬುರಗಿ: ಸೆಕೆಂಡ್​ ಹ್ಯಾಂಡ್ ಕಾರು ವ್ಯಾಪಾರಿಯನ್ನು ಬೆತ್ತಲೆ ಮಾಡಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಹಣಕ್ಕೆ ಬೇಡಿಕೆ ಇಟ್ಟು ನಗರದ ಮನೆಯೊಂದರಲ್ಲಿ ಕೂಡಿಹಾಕಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟು ಹಿಂಸೆ ಕೊಟ್ಟು ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ರಮೇಶ್ ಎಂಬಾತನಿಗೆ ಸೆಕೆಂಡ್ ಹ್ಯಾಂಡ್ ಕಾರ್ ತೋರಿಸಲು ಬಂದಾಗ ಕೂಡಿ ಹಾಕಿ ಇಮ್ರಾನ್ ಪಟೇಲ್, ಮಹಮ್ಮದ್ ಮತೀನ್ ಸೇರಿ ಹಲವರು ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಹಲ್ಲೆಗೈದು ಹಣಕ್ಕೆ ಬೇಡಿಕೆ ಇರಿಸಿದ್ದರು. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಏಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Previous articleಕೊಡಗು: ಮೃತ ವಿದ್ಯಾರ್ಥಿನಿಯ ರುಂಡ ಪತ್ತೆ
Next articleKAS ಅಧಿಕಾರಿಯ ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ