Home News ವ್ಯಕ್ತಿಯೋರ್ವನನ್ನು ಹೊತ್ತೊಯ್ದ ಮೊಸಳೆ

ವ್ಯಕ್ತಿಯೋರ್ವನನ್ನು ಹೊತ್ತೊಯ್ದ ಮೊಸಳೆ

ದಾಂಡೇಲಿ: ನಗರದ ಅಲೈಡ್ ಏರಿಯಾ ಹತ್ತಿರ ಶನಿವಾರ ಸಂಜೆ ಕಾಳಿನದಿ ದಡದಲ್ಲಿ ಮೊಸಳೆಯೊಂದು ವ್ಯಕ್ತಿಯೊಬ್ಬನನ್ನು ಎಳೆದುಕೊಂಡು ಹೋದ ಘಟನೆ ನಡೆದಿದೆ.
ಸುರೇಶ ವಸಂತ ತೇಲಿ(೪೪) ಮೊಸಳೆ ಎಳೆದೊಯ್ದ ವ್ಯಕ್ತಿ. ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಇವರು ಅಗಲಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನಾ ಸ್ಥಳದಲ್ಲಿ ನಗರಸಭೆಯ ಪೌರಾಯುಕ್ತ ರಾಜಾರಾಮ ಪವಾರ, ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ, ಡಿವೈಎಸ್‌ಪಿ ಕೆ.ಎಲ್.ಗಣೇಶ, ಸಿಪಿಐ ಬಿ.ಎಸ್.ಲೋಕಾಪುರ, ವಾರ್ಡ ಸದಸ್ಯೆ ಪ್ರೀತಿ ನಾಯರ್, ನಗರ ಪೊಲೀಸ ಠಾಣೆಯ ಪಿಎಸ್‌ಐ ಕಿರಣ ಪಾಟೀಲ ಮುಂತಾದವರು ಉಪಸ್ಥಿತರಿದ್ದಾರೆ. ಕಾಳಿ ನದಿಯಲ್ಲಿ ವ್ಯಕ್ತಿಯ ಶೋಧ ಕಾರ್ಯ ಮುಂದುವರೆದಿದೆ.

ಮೊಸಳೆ
Exit mobile version