ವೇಶ್ಯವಾಟಿಕೆ ನಡೆಸುತ್ತಿದ್ದ ಆರೋಪಿ ಬಂಧನ

0
42

ದಾವಣಗೆರೆ: ಮನೆಯೊಂದರಲ್ಲಿ ಅಕ್ರಮವಾಗಿ ವೇಶ್ಯವಾಟಿಕೆ ನಡೆಸುತ್ತಿರುವ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಇಲ್ಲಿನ ಅಶೋಕ ನಗರದ ಹೊರವಲಯದಲ್ಲಿ ನಡೆದಿದೆ.

ಗಣೇಶ @ ಜ್ಞಾನೇಶ ಎಂಬ ಆರೋಪಿತನನ್ನು ಮಹಿಳಾ ಠಾಣೆಯ ಪಿಎಸ್ ಐ ನೂರ್ ಅಹಮದ್ ಮತ್ತವರ ಸಿಬ್ಬಂದಿಗಳಗಳನ್ನೊಳಗೊಂಡ ತಂಡವು ಬಂಧಿಸಿದೆ.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್ ಅವರ ನೇತೃತ್ವದಲ್ಲಿ ಜೂ.28 ರಂದು ದಾಳಿ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಮುಚ್ಚಿರುವ ದಾಂಡೇಲಿ ಶಾಲೆ: ಲೀಸ್‌ ಭೂಮಿ ಮರಳಿ ಪಡೆಯುವಂತೆ ನಗರಸಭೆಗೆ ಆಗ್ರಹ
Next articleಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ನಾವಿನ್ಯತೆಯೇ ನೂತನ ಮಾರ್ಗ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್