ರಾಜ್ಯಕ್ಕೆ ಬಂತು ಜರ್ಮನಿಯ ಕ್ರೋನ್ಸ್

0
47

MOU ತ್ವರಿತ ಅನುಷ್ಠಾನ ನಮ್ಮ ಬದ್ಧತೆ: ಇಂದು ಘಟಕ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಬೆಂಗಳೂರು: ಜರ್ಮನಿಯ ಕ್ರೋನ್ಸ್ ಸಂಸ್ಥೆಯು ಉತ್ಪಾದನಾ ಘಟಕಕ್ಕೆ ಸಚಿವ ಎಂ. ಬಿ ಪಾಟೀಲ್‌ ಗುದ್ದಲಿಪೂಜೆ ನೆರವೇರಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಶುಭ ಹಾರೈಸಿದ್ದಾರೆ ಕಳೆದ ಡಿಸೆಂಬರ್ ತಿಂಗಳಲ್ಲಿ ಜರ್ಮನಿಯ ನ್ಯೂಟ್ರಾಬ್ಲಿಂಗ್’ನಲ್ಲಿರುವ ಅವರ ಪ್ರಧಾನ ಕಚೇರಿಯಲ್ಲಿ ಸಿಇಒ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿ, ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿ ಮೊದಲ ಹಂತದ ಒಪ್ಪಂದ ಮಾಡಿಕೊಂಡು #GIM2025 ಗೆ ಆಹ್ವಾನ ನೀಡಿದ್ದೆವು. ಅದರಂತೆ ಕಳೆದವಾರ ಬೆಂಗಳೂರಿನಲ್ಲಿ ಜರುಗಿದ ಹೂಡಿಕೆದಾರರ ಸಮಾವೇಶದಲ್ಲಿ MOUಗೆ ಅಂಕಿತ ಹಾಕಲಾಯಿತು. ಇದೀಗ ತಯಾರಿಕಾ ಘಟಕ ನಿರ್ಮಾಣ ಪ್ರಕ್ರಿಯೆ ಆರಂಭವಾಗಿರುವುದು ಸಂತಸ ತರಿಸಿದೆ. ಸಹಸ್ರಾರು ಉದ್ಯೋಗ ಸೃಷ್ಟಿಯಾಗಲಿದೆ. ನಮ್ಮ ಸರಕಾರ ಅತ್ಯಂತ ತ್ವರಿತವಾಗಿ ಈ ಒಡಂಬಡಿಕೆಯನ್ನು ಅನುಷ್ಠಾನಗೊಳಿಸಿ, ದೇಶಕ್ಕೇ ಮಾದರಿಯಾಗಿದೆ. ನುಡಿದಂತೆ ನಡೆಯುತ್ತಿದ್ದೇವೆ ಎಂದಿದ್ದಾರೆ.

Previous articleChampions Trophy : ಟಾಸ್ ಗೆದ್ದು ಬ್ಯಾಟ್‌ ಹಿಡಿದ ಬಾಂಗ್ಲಾದೇಶ
Next articleಖಾಸಗಿ ಫೈನಾನ್ಸ್ ಮಾಲಕ ಸಾವು