ಮಹಿಳೆಯರ ಭದ್ರತೆಗೆ ಚನ್ನಮ್ಮ ಪಡೆ ಕಾರ್ಯಪ್ರವೃತ್ತ

0
7

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಮಹಿಳೆಯರ ಭದ್ರತೆ ಮತ್ತು ಸುರಕ್ಷತೆಗಾಗಿ ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಒಳಗೊಂಡ ಚನ್ನಮ್ಮ ಪಡೆ ಕಾರ್ಯಪ್ರವೃತ್ತವಾಗಿದೆ ಎಂದು ಹು-ಧಾ ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಚನ್ನಮ್ಮ ಪಡೆಯು ಅತ್ಯಂತ ಚುರುಕಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ-ಕಾಲೇಜುಗಳ ಹತ್ತಿರ, ಪೆಟ್ರೋಲಿಂಗ್ ಮಾಡುತ್ತಾ ನಿಗಾವಹಿಸುತ್ತಿದೆ. ಯುವತಿಯರನ್ನು ಚುಡಾಯಿಸುವವರನ್ನು, ಪುಂಡಪೋಕರಿಗಳನ್ನ ಹಾಗೂ ರೋಡ್ ರೋಮಿಯೋಗಳನ್ನು ಸದೆಬಡೆಯಲಿದೆ. ಅದಲ್ಲದೇ ಜನರಲ್ಲಿ ಸತತವಾಗಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Previous articleಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ
Next articleಬಂಧನ ವಾರಂಟ್ ಜಾರಿ; ಪ್ರಜ್ವಲ್‌ಗೆ ಸಂಕಷ್ಟ