ಹುಬ್ಬಳ್ಳಿ: ಮಹಾದಾಯಿಗಾಗಿ ಮಹಾ ವೇದಿಕೆ ವತಿಯಿಂದ 4 ಜಿಲ್ಲೆಗಳ ಮಹಾದಾಯಿ ಕಳಸಾ ಬಂಡೂರಿ ಹೋರಾಟಗಾರ ಎಲ್ಲಾ ಸಂಘಟನೆಗಳ ವೇದಿಕೆ ವತಿಯಿಂದ ಶಂಕರ್ ಅಂಬಲಿ ನೇತೃತ್ವದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ನಂತರ ಕೇಶ್ವಾಪೂರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನೆ ಮುಂದೆ ಧರಣಿ ನಡೆಸಿ ಪ್ರತಿಭಟಿಸಲಾಯಿತು.