ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಂದೆ

0
17
ಆತ್ಮಹತ್ಯೆ

ದಾವಣಗೆರೆ: ಪತ್ನಿ ಸಾವಿನಿಂದ ಮನನೊಂದು ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನು ನೇಣು ಹಾಕಿಕೊಂಡು ಮೃತಪಟ್ಟ ಶರಣಾಗಿರುವ ಘಟನೆ ಎಸ್‌ಪಿಎಸ್ ನಗರದ ಎರಡನೇ ಹಂತದಲ್ಲಿ ಗುರುವಾರ ಸಂಜೆ ನಡೆದಿದೆ.
ಉದಯಕುಮಾರ (35), ಇಂದುಶ್ರೀ (6), ಶ್ರೀಜಯ (3.5) ಮೃತಪಟ್ಟ ದುರ್ದೈವಿಗಳು. 6 ತಿಂಗಳ ಹಿಂದೆ ಪತ್ನಿಯೂ ಹೃದಯಾಘಾತದಿಂದ ಮೃತಪಟ್ಟಿದ್ದರು. ಅದೇ ನೋವಿನಿಂದ ಖಿನ್ನತೆಯಿಂದ ಬಳಲುತ್ತಿದ್ದ ಉದಯಕುಮಾರ ಹಲವು ಬಾರಿ ಸಾವಿಗೆ ಯೋಚಿಸಿದ್ದಾನೆ. ಆದರೆ, ಮಕ್ಕಳನ್ನು ಬಿಟ್ಟು ಹೋದರೆ ಅವರನ್ನು ನೋಡಿಕೊಳ್ಳುವವರು ಯಾರು ಎಂಬ ಉದ್ದೇಶದಿಂದ ತನ್ನ ಮಕ್ಕಳನ್ನು ಕೊಂದು ಕಡೆಗೆ ತಾನು ಸಾವಿಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ.
ಪುಟ್ಟ ಕಂದಮ್ಮಗಳ ಸಾವಿನಿಂದ ಉದಯಕುಮಾರ್ ಸಂಬಂಧಿಕರು ಹಾಗೂ ಅಕ್ಕಪಕ್ಕದ ನಿವಾಸಿಗಳ ಕಣ್ಣುಗಳು ಒದ್ದೆಯಾಗಿದ್ದವು. ಗಾಂಧಿನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಈಜಲು ಹೋಗಿದ್ದ ತಂದೆ ಮಗ ಸೇರಿ ಮೂವರು ಸಾವು
Next articleಸಾಲದ ಶೂಲಕ್ಕೆ ರೈತ ಆತ್ಮಹತ್ಯೆ