ಬೆಂಗಳೂರು-ಲಕ್ಷದ್ವೀಪ ಇಂಡಿಗೊ ವಿಮಾನ ಸಂಚಾರ

0
13

ನವದೆಹಲಿ: ಬೆಂಗಳೂರು ಹಾಗೂ ಲಕ್ಷ ದ್ವೀಪದ ಅಗಟ್ಟಿ ನಡುವೆ ಇಂಡಿಗೊ ನೇರ ವಿಮಾನಯಾವನ್ನು ಮಾ. ೩೧ರಿಂದ ಆರಂಭಿಸಲಿದೆ.
ಮಾಲ್ಡೀವ್ಸ್ನೊಂದಿಗೆ ಭಾರತದ ಸಂಬಂಧ ಹಳಸಿದ ಹಿನ್ನೆಲೆಯಲ್ಲಿ ಭಾರತೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಲಕ್ಷದ್ವೀಪದತ್ತ ಮುಖ ಮಾಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಇಂಡಿಗೋ ವಿಮಾನಯಾನ ಆರಂಭಿಸಿದೆ. ಇಂಡಿಗೊ ವಿಮಾನಯಾನದ ೧೨೧ ಸಂಪರ್ಕ ತಾಣದಲ್ಲಿ ಅಗಟ್ಟಿ ದೇಶೀಯ ನೆಲದಲ್ಲಿ ೮೮ನೇ ತಾಣವಾಗಿದೆ. ಲಕ್ಷದ್ವೀಪ ಪ್ರಯಾಣಕ್ಕೆ ಎಟಿಆರ್ ವಿಮಾನವನ್ನು ಇಂಡಿಗೊ ಬಳಸುತ್ತಿದೆ. ಇದರಲ್ಲಿ ೭೮ ಆಸನಗಳು ಇವೆ. ಸಮುದ್ರದಾಳದ ಮೀನುಗಾರಿಕೆ, ಸ್ಕೂಬಾ ಡೈವಿಂಗ್, ಬೋಟಿಂಗ್, ಸ್ಕೀಯಿಂಗ್ ಮತ್ತು ಕಯಾಕಿಂಗ್ ಅಗಟ್ಟಿ ಪ್ರಮುಖ ತಾಣವಾಗಿದೆ. ಲಕ್ಷದ್ವೀಪ ಕೇಂದ್ರಾಡಳಿತ ಪ್ರವೇಶ. ಇಲ್ಲಿಂದ ಸುತ್ತಲಿನ ಬಂಗಾರ, ಪಿಟ್ಟಿ, ತಿನ್ನಕಾರಾ, ಪರಲಿ, ಹಾಗೂ ಪರಲಿ-೨ ತಾಣಗಳು ಸಮೀಪದಲ್ಲಿವೆ. ಲಕ್ಷದ್ವೀಪದ ಅಗಟ್ಟಿಗೆ ಮಾತ್ರ ಸದ್ಯ ವಿಮಾನ ಸಂಚಾರ ಇದೆ. ಅಲಯನ್ಸ್ ಏರ್ ಮಾತ್ರ ಇದ್ದು, ಏಪ್ರಿಲ್‌ನಿಂದ ಎಫ್‌ಎಲ್‌ವೈ ೯೧ ಸಂಖ್ಯೆಯ ವಿಮಾನ ಕೂಡ ಹಾರಾಟ ಆರಂಭಿಸಲಿದೆ ಎಂದು ಇಂಡಿಗೋ ಕಂಪನಿ ತಿಳಿಸಿದೆ.

Previous articleಯದುವೀರ್ ಜತೆ ವೇದಿಕೆಯಲ್ಲಿ ಪ್ರತಾಪ್
Next article೧೨ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ