ಬಿಜೆಪಿ ಜತೆ ಕುಮಾರಸ್ವಾಮಿ ಕೈ ಜೋಡಿಸಿದ್ದು ಡಿಕೆಶಿ ಜೈಲಿಗೆ ಕಳಿಸಲು…

0
15

ಚಿತ್ರದುರ್ಗ: ಬಿಜೆಪಿ ಜೊತೆ ಎಚ್‌.ಡಿ. ಕುಮಾರಸ್ವಾಮಿ ಕೈ ಜೋಡಿಸಿದ್ದು ಡಿ.ಕೆ. ಶಿವಕುಮಾರ್ ಜೈಲಿಗೆ ಕಳಿಸಲು ಇರಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಡಿಕೆಶಿ ಜೈಲಿಗೆ ಹೋಗುತ್ತಾರೆ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಒಳಗಿನ ಸಂಚನ್ನ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ನಾವು ಎಲ್ಲವನ್ನು ಎದುರಿಸಲು ಸಜ್ಜಾಗಿದ್ದೇವೆ. ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಜನಪರ ಆಡಳಿತ ನೀಡಲು ನಾವು ಕೆಲಸ ಮಾಡುತ್ತಿದ್ದೇವೆ ಎಂದರು.
ಪ್ರಪಂಚದಲ್ಲಿ ಯಾವುದೇ ಪಕ್ಷ ಮಾಡದ ಕ್ರಾಂತಿಕಾರಿ ಗ್ಯಾರಂಟಿ ಕಾರ್ಡ್ ನೀಡಿದ್ದೇವೆ. ಬಡವರಿಗೆ ಸಹಾಯ ಮಾಡಿದ್ದು BJP-JDS ಕಣ್ಣು ಕುಕ್ಕುತ್ತಿದೆ. ಅವರು ಇದ್ದಾಗ ಬರೀ ಲಂಚ ಹೊಡೆದು ಕಾಲ ಕಳೆದರು. ಬಡವರ, ರೈತರ ಪರ ಸರ್ಕಾರ ಇರುವುದು ಸಹಿಸಲು ಆಗುತ್ತಿಲ್ಲ. ಹೀಗಾಗಿ ನಮ್ಮ ಲೀಡರ್‌ಗಳನ್ನ ಜೈಲಿಗೆ ಹಾಕುತ್ತೇವೆ ಎಂದು ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯದ ಜನ ಎರಡೂ ಪಕ್ಷಗಳಿಗೂ ಪಾಠ ಕಲಿಸಿದ್ದಾರೆ, ಮುಂದೆಯೂ ಕಲಿಸುತ್ತಾರೆ ಎಂದರು.

Previous articleಸಂ.ಕ ಕಚೇರಿಯಲ್ಲಿ ಚಿಣ್ಣರ ಕಲರವ, ಸ್ವರ್ಣ ಸಂಭ್ರಮ
Next articleಹಿಂದೂ ಸಮಾಜೋತ್ಸವ: ಪಂಪ್‌ವೆಲ್‌ಗೆ ನಿರ್ಬಂಧ