ಬಿಜೆಪಿ ಕಾರ್ಯಕರ್ತರಿದ್ದ ಕಾರು ಅಪಘಾತ: ಓರ್ವ ಗಂಭೀರ

0
32
uttar kannada

ಶಿರಸಿ: ಶಿರಸಿ-ಕುಮಟಾ ಹೆದ್ದಾರಿಯಲ್ಲಿ ತಾಲೂಕಿನ ಹಾರೂಗಾರ ಬಳಿ ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ವಕೀಲ ನಿತಿನ್ ರಾಯ್ಕರ್ ತೀವ್ರ ಗಾಯಗೊಂಡಿದ್ದು, ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ಸಾಗಿಸಲಾಗಿದೆ. ಕಾರಿನಲ್ಲಿದ್ದ ವಿ.ಎಂ. ಹೆಗಡೆ, ಪ್ರದೀಪ ಫುಂಜಿ, ಸಂದೇಶ ಶೆಟ್ಟಿ, ಗಾಯಗೊಂಡಿದ್ದಾರೆ.
ಶಿರಸಿಯಲ್ಲಿ ನಡೆದ ಬಿಜೆಪಿಯ ಕಾರ್ಯಾಗಾರದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಶಿರಸಿಯೆಡೆಗೆ ಬರುತ್ತಿದ್ದ ಸಿಮೆಂಟ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದು, ಗದ್ದೆಗೆ ಹಾರಿದೆ ಎನ್ನಲಾಗಿದೆ. ಈ ಕುರಿತು ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleನಟಿ ಖುಷ್ಬೂ ಸುಂದರ್‌ಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು
Next articleಸಿಡಿಲು ಬಡಿದು ಯುವಕರಿಬ್ಬರ ಸಾವು