ಬಕ್ರೀದ್: ಹುಬ್ಬಳ್ಳಿ ಈದ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ

0
44

ಹುಬ್ಬಳ್ಳಿ : ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲೀಂ ಸಮುದಾಯದವರು ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಹತ್ತಿರದ ಈದ್ಗಾ ಮೈದಾನದಲ್ಲಿ ಶನಿವಾರ ಪ್ರಾರ್ಥನೆ ಸಲ್ಲಿಸಿದರು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸಮಾಜದವರು ಪ್ರಾರ್ಥನೆ ಸಲ್ಲಿಸಿ, ಶಾಂತಿ, ಸೌರ್ಹಾದತೆ ಸಂದೇಶ ಸಾರಿದರು. ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂಗೋಳ್ಳಿ‌ ರಾಯಣ್ಣ ವೃತ್ತ, ಕೋರ್ಟ್ ವೃತ್ತ, ರೈಲ್ವೆ ನಿಲ್ದಾಣ ರಸ್ತೆಯ ಲ್ಯಾಮಿಂಗ್ಟನ್ ಶಾಲೆಯವರೆಗೂ ರಸ್ತೆಯಲ್ಲಿ ಸೇರಿದ್ದ ಸಮಾಜದವರು ಪ್ರಾರ್ಥನೆ ಸಲ್ಲಿಸಿದ್ದರು. ಕಾರವಾರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲೂ ಕೂಡ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಾರ್ಥನೆ‌ ನಂತರ ಪರಸ್ಪರ ಶುಭಾಷಯ ಕೋರಿದರು. ಸಮಾಜದ ಮುಖಂಡರಾದ ಎ.ಎಂ. ಹಿಂಡಸಗೇರಿ, ಮಹ್ಮದ್ ಯೂಸೂಫ್ ಸವಣೂರ, ಅಲ್ತಾಫ್ ಕಿತ್ತೂರ, ಅಲ್ತಾಫ್ ಹುಸೇನ್ ಹಳ್ಳೂರ ಸೇರಿದಂತೆ ಮುತುವಲ್ಲಿಗಳು ಭಾಗವಹಿಸಿದ್ದರು.

Previous articleಸೋಷಿಯಲ್ ಮೀಡಿಯಾ ದುರುಪಯೋಗ ಬೇಡ: ಡ್ರಗ್ಸ್ ನಿಂದ ದೂರವಿರಿ
Next articleRCB ಅಭಿಮಾನಿಗಳ ಕಾಲ್ತುಳಿತ ಪ್ರಕರಣ: KSCAಯ ಇಬ್ಬರು ಪದಾಧಿಕಾರಿಗಳು ರಾಜೀನಾಮೆ