ಪುರಸಭೆ ಪೌರ ಕಾರ್ಮಿಕ ಕಾಣೆ

0
7

ಕುಷ್ಟಗಿ: ದೇಶದಾದ್ಯಂತ ಇಂದು ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಆದರೆ ರ್ದೈವದ ಸಂಗತಿ ಏನೆಂದರೆ ಪಟ್ಟಣದ ಪುರಸಭೆಯ ಪೌರಕಾರ್ಮಿಕರ ಒಬ್ಬರು ಕಾಣೆಯಾಗಿದ್ದು ತೀವ್ರ ಸಂಚಲನ ಉಂಟುಮಾಡಿದೆ.
ಕುಷ್ಟಗಿ ಪುರಸಭೆ ಪೌರ ಕಾರ್ಮಿಕ ಶಿವಮೂರ್ತೆಪ್ಪ ಕಟ್ಟಿಮನಿ ಏ.30ರ ಬೆಳಗ್ಗೆಯಿಂದ ಕಾಣೆಯಾಗಿರುವುದು ಗೊತ್ತಾಗಿದೆ.
59 ವರ್ಷದ ಶಿವಮೂರ್ತೆಪ್ಪ ಕಟ್ಟಿಮನಿ ಅವರಿಗೆ ಕಿವಿ ಕೇಳಿಸುವುದಿಲ್ಲ ಎಂದು ತಿಳಿದಿದೆ. ಮಂಗಳವಾರ ಬೆಳಗ್ಗೆ ಮನೆಯಿಂದ ಪ್ರತಿದಿನದಂತೆ ಸೈಕಲ್ ತೆಗೆದು ಹೋಗಿದ್ದ ಅವರು, ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸೈಕಲ್ ನಿಲ್ಲಿಸಿ ಹೋದವರು ಮತ್ತೆ ಮರಳಿ ಮನೆಗೆ ಬಂದಿಲ್ಲ. ಕುಷ್ಟಗಿಯಲ್ಲಿ ಮಂಗಳವಾರ ಸಂಜೆಯಿಂದ ಮಧ್ಯರಾತ್ರಿ 3:00 ವರೆಗೂ ಹುಡುಕಿದ್ದೇವೆ ಆದರೆ ಎಲ್ಲಿಯೂ ಕೂಡ ಪತ್ತೆಯಾಗಿರುವುದಿಲ್ಲ.ಅದೇ ರೀತಿಯಾಗಿ ನಾಣೆಯಾದ ಶಿವಮೂರ್ತೆಪ್ಪ ಕಟ್ಟಿಮನಿ ಇವರ ಮಗಳು ಗಜೇಂದ್ರಗಡದಲ್ಲಿ ವಾಸವಿರುವ ಹಿನ್ನೆಲೆ ಅಲ್ಲಿಗೆ ಹೋಗಿರಬಹುದು ಎಂದು ಅಲ್ಲಿಯೂ ಹುಡುಕಾಟ ನಡೆಸಲಾಗಿದೆ. ಆದರೆ ಪತ್ತೆಯಾಗದ ಹಿನ್ನೆಲೆ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಸಂಜೆಯವರೆಗೂ ಹುಡುಕಾಟ ನಡೆಸಿ ಪತ್ತೆಯಾಗದೇ ಇದ್ದಲ್ಲಿ ಪೊಲೀಸರಿಗೆ ದೂರು ನೀಡಲಾಗುವುದು ಕಾಂಗ್ರೆಸ್ ಮುಖಂಡ ಮಂಜುನಾಥ ಕಟ್ಟಿಮನಿ ತಿಳಿಸಿದ್ದಾರೆ.

Previous articleಜಾಮೀನಿನ‌ ಮೇಲೆ ಬಿಡುಗಡೆಯಾದ ಆರೋಪಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ
Next articleಕಪ್ಪೆಚಿಪ್ಪು ತೆಗೆಯಲು ನದಿಯಲ್ಲಿ ಇಳಿದಿದ್ದ ತಾಯಿ ಮಗಳು ಸಾವು!