ತಾಂತ್ರಿಕ ಅಡಚಣೆ: ಜೋಯಿಡಾ ಬದಲಿಗೆ ರಾಮನಗರಕ್ಕೆ ಕುಮಾರಸ್ವಾಮಿ ಹೆಲಿಕಾಪ್ಟರ್

0
24

ಕಾರವಾರ: ಜೋಯಿಡಾದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಗೆ ಆಗಮಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಹೆಲಿಕಾಪ್ಟರ್ ಸಂಪರ್ಕ ಕೊರತೆಯಿಂದಾಗಿ ರಾಮನಗರಕ್ಕೆ ತೆರಳಿದ ಘಟನೆ ನಡೆದಿದೆ.
ಹಳಿಯಾಳ ಜೋಯಿಡಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್ ಘೋಟ್ನೇಕರ್ ಪರ ಪ್ರಚಾರಕ್ಕೆ ಸವದತ್ತಿಯಿಂದ ಜೋಯಿಡಾಕ್ಕೆ ಆಗಮಿಸಿದ್ದ ವೇಳೆ ಸಂಪರ್ಕ ಕೊರತೆಯಿಂದ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಸಾಧ್ಯವಾಗಿರಲಿಲ್ಲ. ಇದೇ ಕಾರಣಕ್ಕೆ 20 ನಿಮಿಷ ಆಗಸದಲ್ಲಿಯೆರ ಹಾರಾಟ ನಡೆಸಿತ್ತು.
ಹೆಲಿಪಾಡ್ ನತ್ತ ಬಂದಾಗ ಸಿಗ್ನಲ್ ನೀಡದೇ ಗಂಧಕದ ಹೊಗೆ ಕೂಡ ಹಾಕದೇ ಯಾವುದೇ ರಿತಿಯ ಸೂಚನೆ ಸಿಗದ ನಿರ್ದಿಷ್ಟ ಹೆಲಿಕಾಪ್ಟರ್ ಆಗಸದಲ್ಲಿಯೇ ಸುತ್ತಾಟ ನಡೆಸುತ್ತಿತ್ತು.
ಕೊನೆಗೆ ವೈರಲೆಸ್ ಮೂಲಕ ಸಂದೇಶ ನೀಡಿ ಸಿಗ್ನಲ್ ಕಳುಹಿಸಿದ ಬಳಿಕ ಹೆಲಿಕಾಪ್ಟರ್ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ‌‌‌ ಆಗಮಿಸಿದ್ದಾರೆ. ಜೋಯಿಡಾದ ಬಿ.ಜಿ‌ಎಸ್ ಕಾಲೇಜು ಮೈದಾನದಲ್ಲಿ ಎಸ್.ಎಲ್.ಘೋಟ್ನೇಕರ್ ಪರ ಮತಯಾಚನೆ ನಡೆಸಲಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ ನೀಡಿ ಜೋಯಿಡಾ ಜೆಡಿಎಸ್ ಕಾರ್ಯಕರ್ತರು ಬರಮಾಡಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಹೆಲಿಕಾಪ್ಟರ್ ಲ್ಯಾಂಡಿಂಗ್ ಸಮಸ್ಯೆಯಿಂದ ಜೋಯಿಡಾಕ್ಕೆ ಬರಲು ತಡವಾಗಿದೆ. ಇಲ್ಲಿ ಸಿಗ್ನಲ್ ಸಿಕ್ಕಿರದ ಕಾರಣ 20 ನಿಮಿಷ ಆಕಾಶದಲ್ಲಿಯೇ ಸುತ್ತಾಡುತ್ತಾ ರಾಮನಗರದ ಕಡೆ ತೆರಳಬೇಕಾಯಿತು. ಬೇರೆ ಏನೂ ಸಮಸ್ಯೆ ಆಗಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಹಾಸನದಲ್ಲಿ ರೇವಣ್ಣ ಟಿಕೆಟ್ ಅಸಮಧಾನ ಹಿನ್ನಲೆಯಲ್ಲಿ ನಮ್ಮ ಕುಟುಂಬದ ಅಸಮಾದಾನ ಸರಿಹೋಗಿದೆ. ಯಾವುದೇ ಸಮಸ್ಯೆ ಇಲ್ಲ. ಎಲ್ಲವು ಸರಿಹೋಗುತ್ತಿದೆ ಎಂದ ಅವರು ಹಾಸನದಲ್ಲಿ ಶಕುನಿಗಳು ಕುಟುಂಬದವರ ತಲೆಕೆಡಿಸುವ ವಿಚಾರ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿ ಯಾರು ಶಕುನಿಗಳು ಎಂದು ಕಾಲ ಬಂದಾಗ ಹೇಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

Previous articleಶೆಟ್ಟರ್ ಗೆ ಟಿಕೆಟ್ ನಿರಾಕರಣೆ ಮನೆ ಮುಂದೆ ನೂರಾರು ಬೆಂಬಲಿಗರಿಂದ ಘೋಷಣೆ, ಜೈಕಾರ
Next articleಬಂಡಾಯದ ಸುಳಿವು ನೀಡಿದ ಲಕ್ಷ್ಮಣ ಸವದಿ