ಜೋಶಿಯವರ ಸತತ ಪ್ರಯತ್ನ: ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ ಅಜ್ಜ-ಅಜ್ಜಿ ಮೊಮ್ಮಕ್ಕಳು

0
16

ಹುಬ್ಬಳ್ಳಿ : ಕಳೆದ ವರ್ಷ ಇಹಲೋಕ ತ್ಯಜಿಸಿದ್ದ ಪ್ರಿಯದರ್ಶಿನಿ ದೇಸಾಯಿಯವರ ಮಕ್ಕಳನ್ನ ಆಸ್ಟ್ರೇಲಿಯಾದ ಸರಕಾರದ ಜತೆ ಈ ಹಿಂದೆ ವಿದೇಶಾಂಗ ಸಚಿವರಾಗಿದ್ದ, ಎಸ ಜೈಶಂಕರ ಮೂಲಕ ಸತತ ಸಂಪರ್ಕ ಸಾಧಿಸಿ ಅವರ ಮೊಮ್ಮಕ್ಕಳನ್ನ ಭಾರತಕ್ಕೆ ಕರೆಸಿಕೊಂಡು ಅಜ್ಜ ಅಜ್ಜಿಯ ಮಡಿಲು ಸೇರಿಸುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಯಶಸ್ವಿಯಾಗಿದ್ದಾರೆ.

ದೇಸಾಯಿಯವರ ಕುಟುಂಬ ಹಾಗೂ ಅವರ ಮೊಮ್ಮಕ್ಕಳು ಇಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿಯವರನ್ನ ಭೇಟಿ ಮಾಡಿ ಅವರ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದರು. ಮೊಮ್ಮಕ್ಕಳ ಭವಿಷ್ಯ ಕಾಪಾಡಿದಕ್ಕೆ ಅಭಿನಂದಿಸಿದರು .

ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ ದೇಸಾಯಿಯವರು, ಕೇಂದ್ರ ಸಚಿವರಾಗಿರುವ ಪ್ರಲ್ಹಾದ ಜೋಶಿಯವರು ಇರದೇ ಹೋದಲ್ಲಿ ನಮ್ಮ ಮೊಮ್ಮಕ್ಕಳು ಇಂದು ನಮ್ಮ ಮಡಿಲು ಸೇರುತ್ತಿರಲಿಲ್ಲ. ಮಗಳು ದೈವಾಧೀನರಾದ ಸಂದರ್ಭದಲ್ಲಿ ಸಾಂತ್ವನ ನೀಡಲು ಮನೆಗೆ ಆಗಮಿಸಿದ ಸಂದರ್ಭದಲ್ಲಿ ನೀಡಿದ ಮಾತಿನಂತೆ ನಮ್ಮ ಮೊಮ್ಮಕ್ಕಳನ್ನು ಕರೆ ತಂದಿದ್ದಾರೆ.
ಇಂದು ಧಾರವಾಡದ ಹಿರಿಯರ ಸಮ್ಮುಖದಲ್ಲಿ ಮೊಮ್ಮಕ್ಕಳು ಅಜ್ಜಾ ಅಜ್ಜಿಯ ಮಡಿಲು ಸೇರಿದ್ದಕ್ಕೆ ಪ್ರಲ್ಹಾದ ಜೋಶಿಯವರ ಸತತ ಪ್ರಯತ್ನವೆ ಕಾರ ಎಂದರು.
ಹಾಗೂ ಅವರ ಪ್ರಯತ್ನ ಇರದೇ ಇದ್ದಲ್ಲಿ, ಮೊಮ್ಮಕ್ಕಳು ಭಾರತಕ್ಕೆ ಬರತಾನೆ ಇರಲಿಲ್ಲ. ಕಾರಣ ಮತ್ತೊಮ್ಮೆ ಪ್ರಲ್ಹಾದ ಜೋಶಿಯವರಿಗೆ ಧನ್ಯವಾದಗಳು ಅರ್ಪಿಸುತ್ತೇವೆ. ಹಾಗೂ ಈ ಸಂದರ್ಭದಲ್ಲಿ ನಮ್ಮ ಮಗಳ ಆತ್ಮಕ್ಕೆ ಇಂದು ಚಿರಶಾಂತಿ ಸಿಕ್ಕಂತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ನನ್ನ ಪ್ರಾಮಾಣಿಕ ಕೆಲಸವನ್ನು ನಾನು ಮಾಡಿದ್ದೇನೆ ಎಂದರು.
ಪ್ರಿಯದರ್ಶಿನಿ ಅವರು ಸಾವು ಆದಾಗ ಅವರ ಮಕ್ಕಳು ಆಸ್ಟ್ರೇಲಿಯಾದಲ್ಲಿ ಇದ್ದರು. ಅವರನ್ನು ಭಾರತಕ್ಕೆ ಕರೆ ತರಲು ಕೆಲವು ಕಾನೂನು ತೊಡಕುಗಳು ಇದ್ದವು. ಹೀಗಾಗಿ ಹಿಂದಿನ ವಿದೇಶಾಂಗ ಸಚಿವ ಜೈಶಂಕರ ಜತೆಗೆ ಸುದೀರ್ಘವಾಗಿ ಮಾತುಕತೆ ನಡೆಸಲಾಗಿತ್ತು. ಭಾರತದ ಹೈಕಮೀಶನ್ ಹಾಗೂ ಆಸ್ಟ್ರೇಲಿಯಾದ ಹೈಕಮೀಶನ ಮಾತುಕತೆ ಮೂಲಕ ಇದೀಗ ದೇಸಾಯಿ ಕುಟುಂಬದಲ್ಲಿ ಸಂತೋಷ ಕಂಡು ಬಂದಿದೆ ಎಂದರು.
ಈ ಸಂದರ್ಭದಲ್ಲಿ ಪ್ರೊ ಮಲ್ಲಿಕಾರ್ಜುನ ಪಾಟೀಲ, ಡಾ.ಎಸ್.ಆರ್ ರಾಮನಗೌಡರ, ಸಿ ಎಸ್ ಪಾಟೀಲ ಮಾಜಿಮಹಾಪೌರರಾದ ಈರೇಶ ಅಂಚಟಗೇರಿ ಹಾಗೂ ದೇಸಾಯಿ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

Previous articleಎಲ್ಲ ಹಗರಣ ಮಾಡಿ 60 ಸ್ಥಾನಕ್ಕೆ ಇಳಿಕೆಯಾಗಿದ್ದಾರೆ
Next articleKSET-24 ವೇಳಾಪಟ್ಟಿ ಪ್ರಕಟ