ಜನತೆಗೆ ಕಾಂಗ್ರೆಸ್‌ನ ಮನಸ್ಥಿತಿ ಅರ್ಥವಾಗಿದೆ

0
10

ನವದೆಹಲಿ: ರಾಜಸ್ಥಾನದಲ್ಲಿ ನಮ್ಮ ಚುನಾವಣಾ ಕಾರ್ಯತಂತ್ರಗಳ‌ ಜೊತೆಗೆ ಮೋದಿ ಸರಕಾರದ ಪ್ರತಿಯೊಂದು ಜನಪರ ಯೋಜನೆಗಳನ್ನು ರಾಜ್ಯದ ಜನತೆಗೆ ತಲುಪಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಖಚಿತವಾಗುತ್ತಿದ್ದಂತೆ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಜನತೆ ಬಿಜೆಪಿಗೆ ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ. ಚುನಾವಣೆಗಾಗಿ ಭರವಸೆ ನೀಡಿ ಸುಮ್ಮನಾಗುವುದಿಲ್ಲ, ಜನತೆಯ ವಿಶ್ವಾಸ ಉಳಿಸುತ್ತೇವೆ ಮತ್ತು ರಾಜಸ್ಥಾನದ ಸಮಗ್ರ ಪ್ರಗತಿಗೆ ನಾವು ಹೊಸ ಯೋಜನೆಗಳೊಂದಿಗೆ ತಯಾರಾಗಿದ್ದೇವೆ ಎಂದರು.
ನಮ್ಮ ಸರಕಾರ ಎಲ್ಲಾ ಸಂದರ್ಭದಲ್ಲಿ ಎಲ್ಲಾ ವಿಷಯಗಳ ಕುರಿತು ಚರ್ಚಿಸಲು ಸಿದ್ಧವಿದೆ, ಆದರೆ ಕಾಂಗ್ರೆಸ್ ವಿನಾಃಕಾರಣ ಸಂಸತ್ ಸಭೆಯಲ್ಲಿ ಗದ್ದಲ ಸೃಷ್ಟಿಸಿ ಸಭೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತದೆ. ಇಂದು ದೇಶದ ಜನತೆಗೆ ಕಾಂಗ್ರೆಸ್‌ನ ಮನಸ್ಥಿತಿ ಅರ್ಥವಾಗಿದೆ ಮತ್ತು ಇಂದಿನ ಚುನಾವಣಾ ಫಲಿತಾಂಶ ಇವೆಲ್ಲದಕ್ಕೂ ಸಾಕ್ಷಿ ಎಂದರು.

Previous articleಕರ್ನಾಟಕದ ಹಣದಿಂದ ತೆಲಂಗಾಣದಲ್ಲಿ ಗೆಲುವು
Next articleಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ