Home Advertisement
Home ತಾಜಾ ಸುದ್ದಿ ಕಾವೇರಿಗಾಗಿ ಖಾಲಿ ಕೊಡ ಹೊತ್ತ ಮಕ್ಕಳು

ಕಾವೇರಿಗಾಗಿ ಖಾಲಿ ಕೊಡ ಹೊತ್ತ ಮಕ್ಕಳು

0
97

ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ನೀರು ಬಿಡುಗಡೆ ಮಾಡುವಂತೆ ಆದೇಶ ಮಾಡಿರುವ ಸುಪ್ರೀಂ ಕೋರ್ಟ್ ಹಾಗೂ ಜಲಾಶಯಗಳಿಂದ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕರೆ ನೀಡಿದ್ದ ಮಂಡ್ಯ ಬಂದ್ ಬೆಂಬಲಿಸಿ ಮಕ್ಕಳು ಖಾಲಿ ಕೊಡ ಹೊತ್ತು ಪ್ರತಿಭಟಿಸಿದರು.
ಕ್ಯಾತುಂಗೆರೆ ಗ್ರಾಮಸ್ಥರು ಮಕ್ಕಳೊಂದಿಗೆ ಖಾಲಿ ಕೂಡ ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಮೆರವಣಿಗೆ ಮೂಲಕ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಧರಣಿ ಸ್ಥಳಕ್ಕೆ ಆಗಮಿಸಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದರು ಇದೆ ವೇಳೆ ಮಕ್ಕಳು ಮುಖ್ಯಮಂತ್ರಿ ಮನವಿ ಮಾಡಿ ಇಲ್ಲಿ ಕುಡಿಯಲು ನೀರಿಲ್ಲ, ಗದ್ದೆ ಕೆಲಸಕ್ಕೆ ನೀರಿಲ್ಲ, ಹಸುವಿಗೆ ನೀರಿಲ್ಲ. ತಮಿಳುನಾಡಿಗೆ ಕಾವೇರಿ ನೀರು ಬಿಡಬೇಡಿ,ಮಳೆ ಇಲ್ಲದ ಕಾರಣ ನಾಲೆಯಲ್ಲಿ ನೀರು ಬರುತ್ತಿಲ್ಲ. ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಸ್ಥಗಿತಗೊಳಿಸಬೇಕು ಎಂದು ಕೋರಿದರು.

Previous articleಕಾವೇರಿ ಹೋರಾಟ ಹತ್ತಿಕ್ಕಲು ಪೊಲೀಸರ ಯತ್ನ : ಹೋರಾಟಗಾರರ ಆಕ್ರೋಶ
Next articleಸಮೃದ್ಧಿಯ ಸಂಕೇತ ಕನ್ನಂಬಾಡಿ ಅಣೆಕಟ್ಟೆ ಭಣಗುಡುತ್ತಿದೆ