ಕಾಡಿನಿಂದ ನಾಡಿಗೆ ಬಂದ ಕಾಡಾನೆ

0
21

ಬೆಳಗಾವಿ : ಗಂಡು ಕಾಡಾನೆಯೊಂದು ಜನನಿಬೀಡ ಪ್ರದೇಶದಲ್ಲಿ ಪತ್ತೆಯಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಹಂಚಿನಾಳ ಕ್ರಾಸ್ ಬಳಿಯ ಗುಲಾಬಶಾ ದರ್ಗಾ ಬಳಿಯ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ರವಿವಾರ ಬೆಳಿಗ್ಗೆ ನಡೆದಿದೆ.
ರವಿವಾರ ಬೆಳಗ್ಗೆ ಈ ಕಾಡಾನೆ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪೂರ ಗ್ರಾಮದ ವ್ಯಾಪ್ತಿಯಲ್ಲಿ ಪ್ರತ್ಯಕ್ಷ ವಾಗಿದ್ದು, ಈ ಕಾಡಾನೆಯನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆಯ ಬೆಳಗಾವಿ ಎಸಿಎಫ್ ಮಲ್ಲಿನಾಥ ಕುಸನಾಳ ಸೇರಿದಂತೆ ಹುಕ್ಕೇರಿ ವಯಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಇದು ಗಂಡು ಕಾಡಾನೆಯಾಗಿದ್ದು, ಇದು ಮಹಾರಾಷ್ಟ್ರ ಅರಣ್ಯ ಪ್ರದೇಶದಿಂದ ಇದೇ ವರ್ಷದಲ್ಲಿ ಮೂರನೇ ಬಾರಿ ಈ ಪ್ರದೇಶದಲ್ಲಿ ಬಂದಿದೆ ಎನ್ನಲಾಗಿದೆ.

Previous articleನನ್ನನ್ನು ಈಗ ನಿರುದ್ಯೋಗಿ ಮಾಡಿದ್ದಾರೆ
Next articleರಾಜುಗೌಡರ ಸೋಲಿನಿಂದ ಆಘಾತಕ್ಕೆ ಒಳಗಾದ ಪೂಜಾರಿ