ಕಲಬುರಗಿ: ದರ್ಗಾದ ನೂತನ ಪೀಠಾಧಿಪತಿಗಳ ಪಟ್ಟಾಭಿಷೇಕ

0
34

ಕಲಬುರಗಿ: ಖಾಜಾ ಬಂದಾ ನವಾಜ್ (ರ.ಅ) ದರ್ಗಾದ ನೂತನ ಪೀಠಾಧಿಪತಿಗಳ ಪಟ್ಟಾಭಿಷೇಕ

ಹಫೀಝ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ ನೂತನ ಪೀಠಾಧಿಪತಿ

ಕಲಬುರಗಿ: ದಕ್ಕನ್ ಮತ್ತು ಕಲ್ಯಾಣ ಕರ್ನಾಟಕ ಭಾಗದ ಸು ಪ್ರಸಿದ್ಧ ಸೂಫಿ ಸಂತ್ ಹಝ್ರತ್ ಖಾಜಾ ಬಂದಾ ನವಾಜ್ ಗೇಸುದರಾಜ್ (ರ.ಅ) ದರ್ಗಾದ 24ನೇ ಪೀಠಾಧಿಪತಿಯಾಗಿ ಹಫೀಝ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ ಅವರ ಪಟ್ಟಾಭಿಷೇಕ ಕಾರ್ಯಕ್ರಮ ಶನಿವಾರ ದೇಶದ ಪ್ರಸಿದ್ಧ ದರ್ಗಾಗಳ ಪೀಠಾಧಿಪಗಳ ಸಮ್ಮುಖದಲ್ಲಿ ದರ್ಗಾದ ಆವರಣದಲ್ಲಿ ಜರುಗಿತು.

ವಿದ್ವಾಂಸ ಕೆಬಿಎನ್ ದರ್ಗಾದ 23ನೇ ಪೀಠಾಧಿಪತಿಗಳಾದ ದಿವಂಗತ ಡಾ. ಸೈಯದ್ ಷಾ ಖ್ರೂಸ್ರೋ ಹುಸೈನಿ ಅವರು ಗುರುವಾರ ವಯೋಸಹಜವಾಗಿ ನಿಧನರಾಗಿದ್ದರು. ಅವರ ಹಿರಿಯ ಪುತ್ರದರಾದ ಹಫೀಝ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ ಅವರನ್ನು ಧಾರ್ಮಿಕ ವಿಧಿವಿಧಾನಗಳ ಪ್ರಕಾರ ದರ್ಗಾದ 24ನೇ ಸಜ್ಜಾದಾ ನಶೀನ್ (ಪೀಠಾಧಿಪತಿ) ಪಟ್ಟಾಭಿಷೇಕ ಮಾಡಲಾಯಿತು.

ಇದಕ್ಕೂ ಮುನ್ನ ಖಾಜಾ ಬಂದಾ ನವಾಜ್ ದರ್ಗಾದಲ್ಲಿ ಧಾರ್ಮಿಕ ಕಾರ್ಯಕ್ರಮಗಳಾದ ಕತ್ ಮೆ ಕುರಾನ್ (ಕುರಾನ್ ಓದುವುದು), ಫಾತೇಹಾ ಕಾನಿ, ಚಾದರ್ ಗುಲ್ ಸೇರಿದಂತೆ ವಿಧಿವಿಧಾನಗಳ ಕಾರ್ಯಕ್ರಮಗಳು ಮತ್ತು ವಿಶೇಷ ಪ್ರಾರ್ಥನೆಗಳು ಜರುಗಿದವು.

ಪಟ್ಟಾಭಿಷೇಕದ ನಂತರ ನೂತನ ಪೀಠಾಧಿಪತಿಗಳು ದರ್ಗಾದಲ್ಲಿ ನಮಾಜ ಮಾಡುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ದಹಲಿ, ಅಜಮೇರ್, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲೆಂಗಾಣ ಸೇರಿದಂತೆ ದೇಶದ ವಿವಿಧ ಭಾಗಗಳ ಪ್ರಸಿದ್ಧ ದರ್ಗಾಗಳ ಪೀಠಾಧಿಪತಿಗಳು ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಿಸಿ ನೂತನ ಸಜ್ಜಾದೆ ಅವರಿಗೆ ಶುಭಹಾರೈಯಿಸಿ, ಆಶೀರ್ವಾದಿಸಿ ಅಭಿನಂದಿಸಿದರು. ಸದರ ಸೋಫಾನಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿದ ಕವಾಲ್ಲಿ ಗಾಯಕರಿಂದ ಕವಾಲ್ಲಿ ಕಾರ್ಯಕ್ರಮ ನಡೆಯಿತು. ಸಹಸ್ರಾರು
ಭಕ್ತರು ನವ ಪೀಠಧಿಪತಿ ಭೇಟಿಯಾಗಿ ಆಶಿರ್ವಾದ ಪಡೆದರು.

Previous articleಕಂಚಿಕಾಮಕೋಟಿ ಸ್ವಾಮೀಜಿ : ಧರ್ಮಸ್ಥಳ ಪುರಪ್ರವೇಶ
Next articleಅಂತೂ ಬಂತು ವಕ್ಫ್ ಆದೇಶ: ಅಧಿಕಾರಿ ವಿರುದ್ಧ ಶಿಸ್ತು ಕ್ರಮ