ಒತ್ತಡ, ಆಮಿಷ ಹೆಚ್ಚಾಗಿವೆ

0
14
ಕೇಂದ್ರ ಸಚಿವ ಜೋಶಿ ಆಕ್ಷೇಪ

ಧಾರವಾಡ: ಬಿಜೆಪಿ ಗೆ ಪಾಲಿಕೆಯಲ್ಲಿ ಬಹುಮತ ಇದ್ದು, ಬಿಜೆಪಿಯೇ ಮತ್ತೊಮ್ಮೆ ಅಧಿಕಾರದ ಚುಕ್ಕಾಣೆ ಹಿಡಿಯಲಿದೆ ಎಂದು ಕೇಂದ್ರ ಸಚಿವ‌ ಪ್ರಹ್ಲಾದ ಜೋಶಿ ಹೇಳಿದರು. ಮಹಾಪೌರ ಮತ್ತು ಉಪಮಹಾಪೌರರ ಹೆಸರು ಅಂತಿಮಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ವಾಮ ಮಾರ್ಗದ ಮೂಲಕ ಪಾಲಿಕೆ ಅಧಿಕಾರ ಹಿಡಿಯಲು ಹೊರಟಿದೆ. ಆದರೆ, ಅದನ್ನು ಬಿಜೆಪಿ ಹುಸಿಗೊಳಿಸುತ್ತಿದೆ ಎಂದರು.
ಬಿಜೆಪಿ ಸದಸ್ಯರಿಗೆ ಆಸೆ, ಆಮಿಷ, ಒತ್ತಡ ಬರಲು ಶುರುವಾಗಿದ್ದವು. ಈ ರೀತಿಯ ಕೆಟ್ಟ ಚಾಳಿ ರಾಜಕಾರಣದಲ್ಲಿ ಹೆಚ್ಚಾಗಿದೆ. ಹಲವಾರು ಬಾರಿ ಶಾಸಕರನ್ನೇ ಹಿಡಿದಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಎಂದರು. ಕಾಂಗ್ರೆಸ್ ಅಧಿಕಾರದಲ್ಲಿದ್ದು, ಹಣ, ತೋಳ್ಬಲ ಬಳಕೆ ಮಾಡುತ್ತಿದೆ. ಆದ್ದರಿಂದ ಎಲ್ಲ ಪಾಲಿಕೆ ಸದಸ್ಯರು ಒಂದು ಕಡೆ ಇದ್ದರು. ನಮ್ಮ ಸದಸ್ಯರಿಗೆ ಅಭ್ಯಾಸ ವರ್ಗ ಇದ್ದಿಲ್ಲ. ಅದಕ್ಕಾಗಿ ಹೋಗಿದ್ದೇವು ಎಂದು ಉತ್ತರಿಸಿದರು.

Previous articleಚೆನ್ನಮ್ಮ ವೃತ್ತದಲ್ಲಿ ಬಿಗುವಿನ ವಾತಾವರಣ: ಬಿಗು ಬಂದೋಬಸ್ತ
Next articleಅನ್ನ ಭಾಗ್ಯ ಯೋಜನೆಗೆ ಜಾರಿಯಾಗದಂತೆ ಕೇಂದ್ರ ಷಡ್ಯಂತ್ರ