ಈಶ್ವರಪ್ಪ ಅವರದ್ದು ಗೋಡ್ಸೆ ಸಂಸ್ಕೃತಿ

0
30
ಪ್ರಸಾದ ಅಬ್ಬಯ್ಯ

ಹುಬ್ಬಳ್ಳಿ: ಗುಂಡಿಕ್ಕಿ ಕೊಲ್ಲಿ ಎಂಬ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಹೇಳಿಕೆ ಖಂಡನೀಯ. ಗೋಡ್ಸೆ ಸಂಸ್ಕೃತಿ ಅವರದು. ಬಿಜೆಪಿಯವರಿಗೆ ಅವರೇ ಆದರ್ಶಪ್ರಾಯ ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧಿಯವರನ್ನು ಕೊಂದವರನ್ನು ಅನುಸರಿಸಿಕೊಂಡು ಬಂದವರು ಅವರು. ಇಂಥವರಿಂದ ಒಳ್ಳೆಯದನ್ನು ಹೇಗೆ ನಿರೀಕ್ಷಿಸಲು ಸಾಧ್ಯ. ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳಿದ್ದರು. ಸಂವಿಧಾನ ಎಂಬ ಅಭಿಮಾನವೇ ಅವರಿಗೆ ಇಲ್ಲ ಎಂದರು.
ಧರ್ಮ, ದೇವರ ಹೆಸರನ್ನು ಬಳಸಿಕೊಂಡೇ, ಭಾವನಾತ್ಮಕ ವಿಷಯಗಳನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿ ಚುನಾವಣೆಗೆ ಹೋಗುತ್ತದೆ. ಅಭಿವೃದ್ಧಿ ಅಜೆಂಡಾನೇ ಆ ಪಕ್ಷಕ್ಕೆ ಇಲ್ಲ. ಇದು ನಮ್ಮ ದೇಶದ ದುರ್ದೈವ ಎಂದರು.

Previous articleಯಾವುದೇ ಮೈತ್ರಿ ಇಲ್ಲ: 15 ದಿನಗಳಲ್ಲಿ ಅಭ್ಯರ್ಥಿಗಳ ಘೋಷಣೆ
Next articleನಾಯಕರು ಸೂಚನೆ ನೀಡಿದ್ರೆ ಖಂಡಿತ ಲೋಕಸಭೆಗೆ ಸ್ಪರ್ಧೆ