ಇಂದಿಗೆ ಎಲ್ಲವೂ ಮುಗಿದು ಹೋಗಿಲ್ಲ

0
14
ಈಶ್ವರಪ್ಪ

ಶಿವಮೊಗ್ಗ: ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಕಣದಿಂದ ಹಿಂದೆ ಸರಿದಿದ್ದ ಈಶ್ವರಪ್ಪ ಅವರು ತಮ್ಮ ಪುತ್ರ ರಾಕೇಶ್​ನಿಗೆ ಟಿಕೆಟ್​ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೂ ಬಿಜೆಪಿ ಹೈಕಮಾಂಡ್​ ಈಶ್ವರಪ್ಪ ಅವರಿಗೆ ಶಾಕ್ ಕೊಟ್ಟಿದೆ. ಈ ವಿಷಯವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು ಕಾಂತೇಶ್ ಗೆ ಮುಂದಿನ ದಿನಗಳಲ್ಲಿ ಅವನ ಕಾರ್ಯವೈಖರಿ ನೋಡಿ ಪಕ್ಷ ಸೂಕ್ತ ಸ್ಥಾನಮಾನ ಕೊಡುವ ಬಗ್ಗೆ ನಿರ್ಧಾರ ಮಾಡುತ್ತದೆ. ಇವತ್ತಿಗೆ ಇದು ಮುಗಿದು ಹೋಗಿಲ್ಲ. ಪಕ್ಷದ ನಾಯಕರು ಎಲ್ಲವನ್ನೂ ಅಳೆದು ತೂಗಿ ನಿರ್ಧಾರ ಮಾಡಿರುತ್ತಾರೆ ಎಂದು ಹೈಕಮಾಂಡ್ ತೀರ್ಮಾನವನ್ನು ಈಶ್ವರಪ್ಪ ಸಮರ್ಥಿಸಿಕೊಂಡರು.

Previous articleಕಾಂಗ್ರೆಸ್ ಅಂತಿಮ ಪಟ್ಟಿ ಬಿಡುಗಡೆ
Next articleನಾಮಪತ್ರ ಪ್ರಕ್ರಿಯೆ ನಂತರ ಪ್ರಚಾರಕ್ಕೆ ಪ್ರಧಾನಿ ಆಗಮನ