40% ಸರ್ಕಾರಕ್ಕೆ ನಲ್ವತ್ತೇ ಸೀಟು

0
18

ವಿಜಯಪುರ: ರಾಜ್ಯದಲ್ಲಿ ಬಿಜೆಪಿ ಶೇ. 40 ಕಮೀಷನ್ ಸರ್ಕಾರ, ಈ ಕಮೀಷನ್ ಹಣದಿಂದ ಎಂಎಲ್‌ಎಗಳನ್ನು ಕಳುವು ಮಾಡಿ ರಚನೆಯಾದ ಕಳ್ಳ ಸರ್ಕಾರವಾಗಿದೆ, ಆದರೆ ಈ ಶೇ. 40ರ ಬಿಜೆಪಿ ಸರ್ಕಾರಕ್ಕೆ ಈ ಬಾರಿ ಬರುವುದು ಕೇವಲ 40 ಸೀಟು ಎಂದು ರಾಹುಲ್ ವ್ಯಂಗ್ಯವಾಡಿದರು.
ನಗರದ ಕನಕದಾಸ ವೃತ್ತದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ. 40ರಷ್ಟು ಕಮೀಷನ್ ಹಣದಿಂದ ಎಂಎಲ್‌ಎಗಳನ್ನು ಕದ್ದು ಸರ್ಕಾರ ರಚನೆ ಮಾಡಿದೆ, ಆದರೆ ಈ ಬಾರಿ ಈ ರೀತಿಯ ಪರಿಸ್ಥಿತಿ ಇಲ್ಲ, ಕಾಂಗ್ರೆಸ್ 150ಕ್ಕೂ ಹೆಚ್ಚು ಸೀಟು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗುತ್ತಿಗೆದಾರ ಸಂಘದವರು ಪ್ರಧಾನಮಂತ್ರಿಗೆ ಪತ್ರ ಬರೆದು ರಾಜ್ಯದಲ್ಲಿ ಶೇ. 40ರಷ್ಟು ಕಮೀಷನ್ ಬಗ್ಗೆ ಉಲ್ಲೇಖಿಸಿದ್ದಾರೆ, ಈ ಪತ್ರದ ಕುರಿತು ಪ್ರಧಾನಮಂತ್ರಿ ಉತ್ತರ ನೀಡಿಲ್ಲ, ಉತ್ತರ ನೀಡುವುದೂ ಇಲ್ಲ, ಮೋದಿ ಮಾತು ಎತ್ತಿದರೆ ಸಾಕು ತಾವು ಭ್ರಷ್ಟಾಚಾರ ವಿರೋಧಿ ಎನ್ನುತ್ತಾರೆ, ಆದರೆ ಅವರ ಅಕ್ಕಪಕ್ಕದಲ್ಲಿರುವವರು ಯಾರು ಎಂಬುದನ್ನು ನೋಡಿಕೊಳ್ಳಲಿ ಎಂದು ರಾಹುಲ್ ಹೇಳಿದರು.

Previous article29ರಂದು ವಿಜಯಪುರಕ್ಕೆ ಪ್ರಧಾನಿ ಮೋದಿ
Next articleಸಮಾನತೆಯ ಬೆಳಕು ತೋರಿದ ಬಸವೇಶ್ವರರು: ರಾಹುಲ್ ಬಣ್ಣನೆ