ಸೆಂಟ್ರಲ್ ಕ್ಷೇತ್ರದಲ್ಲಿ ನಟ ಶಿವರಾಜಕುಮಾರ ಭರ್ಜರಿ ರೋಡ್ ಶೋ

0
28

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪರವಾಗಿ ಚಿತ್ರನಟ ಡಾ. ಶಿವರಾಜಕುಮಾರ ರೋಡ್ ಶೋ ನಡೆಸಿದರು.
ಇಲ್ಲಿನ ನಾಗಶೆಟ್ಟಿಕೊಪ್ಪದ ಆಂಜನೇಯ ದೇವಸ್ಥಾನದಿಂದ‌ ತೆರೆದ ವಾಹನದಲ್ಲಿ ಬೃಹತ್ ರೋಡ್ ಶೋ ನಡೆಸಿದ ಶಿವರಾಜಕುಮಾರ ಹಾಗೂ ಗೀತಾ ಶಿವರಾಜಕುಮಾರ ಅವರು ಅಭಿಮಾನಿಗಳತ್ತ ಕೈ ಬೀಸಿದರು. ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಅಭ್ಯರ್ಥಿ ಜಗದೀಶ‌ ಶೆಟ್ಟರ್, ಮುಖಂಡರಾದ ರಜತ್ ಉಳ್ಳಾಗಡ್ಡಿಮಠ, ಪಿ.ಕೆ. ರಾಯನಗೌಡ್ರ, ಸತೀಶ್ ಮೆಹರವಾಡೆ, ಶಿಲ್ಪಾ ಶೆಟ್ಟರ್ , ಸಂಕಲ್ಪ ಶೆಟ್ಟರ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

Previous articleಪ್ರಧಾನಿ ಮೋದಿ ರೋಡ್​ ಶೋ: ಹೂವಿನ ಸುರಿಮಳೆ
Next articleಸ್ವಾರ್ಥಕ್ಕಾಗಿ ಪಕ್ಷ ಬಿಟ್ಟವರಿಗೆ ಬುದ್ದಿ ಕಲಿಸಿ