ಸಲ್ಲೇಖನ ವೃತ ಕೈಬಿಟ್ಟ ಗುಣಧರನಂದಿ ಮಹಾರಾಜ್

0
20

ಹುಬ್ಬಳ್ಳಿ: ಹಿರೇಕೋಡಿಯ ಕಾಮಕುಮಾರ ಜೈನಮುನಿ ಹತ್ಯೆ ಖಂಡಿಸಿ ಆಮರಣಾಂತ ಉಪವಾಸ ಕೈಗೊಂಡಿದ್ದ ವರೂರಿನ ಗುಣಧರನಂದಿ ಮಹಾರಾಜ್ ಸ್ವಾಮೀಜಿ ತಮ್ಮ ಸತ್ಯಾಗೃಹವನ್ನು ಹಿಂಪಡೆದಿದ್ದಾರೆ.
ಜೈನ ಮುನಿಗಳಿಗೆ ಭದ್ರತೆ ನೀಡುವಂತೆ ಆಗ್ರಹಿಸಿ ಸ್ವಾಮೀಜಿಗಳು ಆಮರಣಾಂತ ಉಪವಾಸ ಸತ್ಯಾಗೃಹ ಕೈಗೊಂಡಿದ್ದರು. ಆದರೆ, ಇಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಸ್ವಾಮೀಜಿಯವರನ್ನು ಭೇಟಿಯಾಗಿ ಉಪವಾಸ ಬಿಡುವಂತೆ ಮನವಿ ಮಾಡಿದ್ದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಜೈನ‌ಮುನಿಗಳ ಕೊಲೆಯ ಈ ಕೃತ್ಯಕ್ಕೆ ಎಲ್ಲ ಪಕ್ಷದ ಹಾಗೂ ಜನಪ್ರತಿನಿಧಿಗಳಿಂದ ಖಂಡನೆ ವ್ಯಕ್ತವಾಗಿದೆ. ಇಂತಹ ಕೃತ್ಯ ಜಗತ್ತಿನಲ್ಲಿ ಎಲ್ಲೂ ಆಗಬಾರದು. ಡಾ. ಜಿ. ಪರಮೇಶ್ವರ ಅವರು ಅಮರಣಾಂತ ಉಪವಾಸ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಅವರ ಮನವಿಯಂತೆಯೇ ನಾನು ಅಮರಣಾಂತ ಉಪವಾಸ ಹಿಂಪಡೆಯುತ್ತೇನೆ ಎಂದಿದ್ದಾರೆ. ನಾವು ಅಹಿಂಸಾವಾದಿಗಳು. ಅದೇ ತತ್ವದಲ್ಲಿ ನಾವು ಬದುಕುವಂತವರು. ಜೈನ‌ಮುನಿಗಳನ್ನ ಹತ್ಯೆ ಮಾಡಿದವರಿಗೆ ಶಿಕ್ಷಣದ ಮೂಲಕ ಆರೋಪಿಗಳ ಮನ ಮನಪರಿವರ್ತನೆ ಮಾಡಬೇಕು. ಅವರಿಗೆ ಕಠಿಣ ಶಿಕ್ಷೆ ನೀಡುವುದೇನೂ ಬೇಡ ಅವರ ಕುಟುಂಬಕ್ಕೆ ಒಳ್ಳೆಯದಾಗಬೇಕು. ಜೈನ‌ಮುನಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದ ಅವರು, ಭಾವನಾತ್ಮಕವಾಗಿ ಸ್ಪಂದಿಸಿದ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿದರು.

Previous articleಗುಣಧರ ನಂದಿ ಮಹಾರಾಜ್ ಭೇಟಿಯಾದ ಗೃಹ ಸಚಿವ…
Next articleಜೈನ ಮುನಿಗಳಿಗೆ ಸೂಕ್ತ ಭದ್ರತೆಯ ಭರವಸೆ