ವಿಜಯೇಂದ್ರ ಗೆಲ್ಲದಂತೆ ವಾಮಾಚಾರ

0
122

ಬಿ.ವೈ. ವಿಜಯೇಂದ್ರ ಚುನಾವಣೆಯಲ್ಲಿ ಸೋಲುವಂತೆ ವಾಮಾಚಾರ ನಡೆಸಲಾಗಿತ್ತು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಶಿಕಾರಿಪುರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕಾರಿಪುರ ತಾಲೂಕು ಬಂಡಿ ಭೈರಪುರಹಳ್ಳಿ ಮಜಿರೆ ಸಿದ್ದಾಪುರ ಗ್ರಾಮದ ಸರ್ವೆ ನಂಬರ್ 35ರಲ್ಲಿ ಯಡಿಯೂರಪ್ಪ ಒಡೆತನದ ಅಡಕೆ ತೋಟವಿದೆ. ಈ ತೋಟದಲ್ಲಿ ಪುನುಗು‌ ಬೆಕ್ಕನ್ನು ಮಣ್ಣಿನಲ್ಲಿ ಹೂತಿಟ್ಟು ಅದಕ್ಕೆ ಪೂಜೆ ನಡೆಸಿ, ವಾಮಚಾರ ನಡೆಸಲಾಗಿದೆ ಎಂದಿದ್ದಾರೆ.
ಈ ಕುರಿತಂತೆ ತೋಟ ನೋಡಿಕೊಳ್ಳುವ ರಮೇಶ್ ಎನ್ನುವವರು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಅವರು ತಿಳಿಸಿದರು.

Previous articleಡಿಕೆಶಿ ದೆಹಲಿ ಪ್ರವಾಸ ರದ್ದು
Next article`ಒಂದು ನಿಲ್ದಾಣ ಒಂದು ಉತ್ಪನ್ನ’ ಜನಪ್ರಿಯತೆ