ಮೇವಿನ ಗಾಡಿ ತಳ್ಳಿ ಹಳ್ಳಿ ಜನಮನ ಗೆದ್ದ ಸಚಿವ ಲಾಡ್

0
9

ಹುಬ್ಬಳ್ಳಿ: ಕಲಘಟಗಿ ತಾಲ್ಲೂಕು ಮಡಕಿ ಹೊನ್ನಳ್ಳಿ ಸಮೀಪ ಬೆಳಗಿನ ಜಾವ ತಾವು ವಾಯುವಿಹಾರಕ್ಕೆ ತೆರಳಿದ್ದ ವೇಳೆ ರಸ್ತೆಯಲ್ಲಿ ರೈತರೊಬ್ಬರು ಮೇವಿನ ಗಾಡಿ ತಳ್ಳಿಕೊಂಡು ಹೊರಟಿದ್ದನ್ನು ಕಂಡ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಆ ರೈತರು ಗಾಡಿ ತಳ್ಳುವುದನ್ನು ಬಿಡಿಸಿ ತಾವೇ ಗಾಡಿಯನ್ನು ತಳ್ಳಿಕೊಂಡು ಹೋಗಿ ರೈತರ ಮನೆಯವರೆಗೂ ಮುಟ್ಟಿಸಿದ್ದು, ಇದು ಕಲಘಟಗಿ ಕ್ಷೇತ್ರದ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದ್ದ ಸಚಿವ ಸಂತೋಷ ಲಾಡ್‌ಗೆ ಮಾರ್ಗ ಮಧ್ಯದಲ್ಲಿ ರೈತ ದಂಪತಿ ಮೇವಿನ ಗಾಡಿ ತಳ್ಳಿಕೊಂಡು ಹೋಗುತ್ತಿರುವುದನ್ನು ಗಮನಿಸಿದ್ದಾರೆ. ಅದನ್ನು ಕಂಡು ರೈತರೊಂದಿಗೆ ಮಾತನಾಡುತ್ತ ಸ್ವಲ್ಪ ಮುಂದೆ ಸಾಗಿದ್ದಾರೆ. ಬಳಿಕ ತಾವೇ ಮೇವಿನ ಗಾಡಿ ತಳ್ಳಿಕೊಂಡು ಹೋಗಿ ಸಹಾಯ ಮಾಡಿದ್ದಾರೆ.

Previous articleಕೊಲೆಗಡುಕರು, ದಂಗೆಕೋರರಿಗೆ ಕಾಂಗ್ರೆಸ್ ಬೆಂಬಲ
Next articleಬೆಳಿಗ್ಗೆ ಸಂಜೆ ಉಚಿತ ನೈಂಟಿ ಕೊಡಿ