ದಾವಣಗೆರೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದ ಎನ್ಐಎ

0
115
ಎನ್ಐಎ

ದಾವಣಗೆರೆ: ದಾವಣಗೆರೆ ಮತ್ತು ಹರಿಹರದಲ್ಲಿ ಗುರುವಾರ ಎನ್ಐಎ ಅಧಿಕಾರಿಗಳ ದಾಳಿ ನಡೆಸಿ ಪಿಎಫ್ಐನ ಇಬ್ಬರು ಮುಖಂಡರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ದಾವಣಗೆರೆ ಮತ್ತು ಹರಿಹರದಲ್ಲಿ ಇಬ್ಬರನ್ನು ವಿಚಾರಣೆ ನಡೆಸಿರುವ ಎನ್ಐಎ ಅಧಿಕಾರಿಗಳು ದಾವಣಗೆರೆಯ ಎಂಸಿಸಿ ಬಿ ಬ್ಲಾಕ್ ನಿವಾಸಿ ಇಮಾಮುದ್ದಿನ್ ಎಂಬುವನನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ ಎನ್ನಲಾಗುತ್ತಿದೆ. ವಶಕ್ಕೆ ಪಡೆದಿರುವ ಇಮಾಮುದೀನ್ ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷ ಎಂದು ತಿಳಿದು ಬಂದಿದೆ.
ಹರಿಹರ ಮೂಲದ ಅಬು ತಾಹೀರ್ ಎಂಬುವನ್ನು ಸಹ ವಿಚಾರಣೆಗೆ ವಶಕ್ಕೆ ತೆಗೆದುಕೊಂಡಿದ್ದಾರೆ. ದಾವಣಗೆರೆ ಕೆಟಿಜೆ ನಗರದಲ್ಲಿ ಅಬು ತಾಹಿರ್ ವಿಚಾರಣೆಗೆ ಒಳಪಡಿಸಲಾಗಿದೆ. ಎಸ್‌ಡಿಪಿಐ ಮತ್ತು ಪಿಎಪ್ಐ ಲಿಂಕ್ ಮೇಲೆ ವಿಚಾರಣೆ ನಡೆಸಿದರು. ಹರಿಹರ ಮೂಲದ ಅಬು ತಾಹೀರ್ ಕಳೆದ ರಾತ್ರಿ ಸಂಬಂಧಿಕರ ಮನೆಗೆ ಬಂದಿದ್ದ ಎನ್ನಲಾಗಿದೆ.

Previous articleವಾಣಿಜ್ಯನಗರಿಯಲ್ಲಿ ಎಸ್‌ಡಿಪಿಐ ಪ್ರತಿಭಟನೆ: ಲಘು ಲಾಠಿ‌ ಪ್ರಹಾರ
Next articleಎನ್‌ಐಎ ತಂಡ ದಾಳಿ ಪಿಎಫ್‌ಐ ಜಿಲ್ಲಾಧ್ಯಕ್ಷನ ಬಂಧನ