ತವಣಪ್ಪ ಅಷ್ಟಗಿ ಕಾಂಗ್ರೆಸ್‌ ಸೇರ್ಪಡೆ

0
38

ಧಾರವಾಡ: ಬಿಜೆಪಿ ಬಂಡಾಯ ಅಭ್ಯರ್ಥಿ ತವಣಪ್ಪ ಅಷ್ಟಗಿ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾದರು.
ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅಷ್ಟಗಿಯವರು ಟಿಕೆಟ್‌ ದೊರೆಯದ ಕಾರಣ ಅಸಮಾಧಾನಗೊಂಡಿದ್ದರು. ಅಲ್ಲದೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರವನ್ನೂ ಕೂಡ ಅವರು ಸಲ್ಲಿಸಿದ್ದರು. ಜಗದೀಶ ಶೆಟ್ಟರ್‌ ಬಳಿಕ ತವಣಪ್ಪ ಅಷ್ಟಗಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದು ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಪ್ಲಸ್‌ ಪಾಯಿಂಟ್‌ ಆಗಿದೆ.
ಧಾರವಾಡದಲ್ಲಿ ಕಾಂಗ್ರೆಸ್ ಸೇರ್ಪಡೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ತವನಪ್ಪ ಅಷ್ಟಗಿ, ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ಸಿಗಲಿಲ್ಲ. ಯಾವುದೇ ಷರತ್ತು ವಿಧಿಸಿದೇ ಗೌರವ ಬಯಸಿ ಕಾಂಗ್ರೆಸ್‌ ಸೇರಿದ್ದೇನೆ. ಸತೀಶ ಜಾರಕಿಹೊಳಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಅವರು ಹೇಳಿದ್ದರಿಂದ ಕಾಂಗ್ರೆಸ್ ಸೇರಿದ್ದೇವೆ. ನಾಳೆ ನಾಮಪತ್ರ ವಾಪಸ್ ಪಡೆಯುವೆ ಎಂದು ಸ್ಪಷ್ಟಪಡಿಸಿದರು.

Previous articleನನ್ನನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ
Next articleವರುಣಾದಲ್ಲಿ ನನ್ನ ಗೆಲುವು ನಿಶ್ಚಿತ