ಉಡುಪಿ: ಕಾರೊಂದು ಟಿಪ್ಪರ್ ಹಿಂಬದಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ಬಳಿಕವೂ ಟಿಪ್ಪರ್ ಕಾರನ್ನು ಕಿಲೋ ಮೀಟರ್‌ಗಟ್ಟಲೇ ದೂರ ಎಳೆದೊಯ್ದ ಘಟನೆ ಉಡುಪಿಯಲ್ಲಿ ನಡೆದಿದೆ.
ಇಲ್ಲಿನ ಕನ್ನಂಗಾರ್ ಬೈಪಾಸ್ ಬಳಿ ಈ ಘಟನೆ ನಡೆದಿದ್ದು, ಟಿಪ್ಪರ್ ಚಾಲಕನಿಗೆ ಇನ್ನೊಂದು ವಾಹನದ ಮೂಲಕ ಮಾಹಿತಿ ನೀಡಿ ಹೆಜಮಾಡಿಯಲ್ಲಿ ನಿಲ್ಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕಾಗಮಿಸಿದ ಪಡುಬಿದ್ರಿ ಪೊಲೀಸರು ಸಮಗ್ರ ತನಿಖೆ ಕೈಗೊಂಡಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಮುಕ್ಕಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.