Home ನಮ್ಮ ಜಿಲ್ಲೆ ಉಡುಪಿ ಟಿಪ್ಪರ್‌ಗೆ ಡಿಕ್ಕಿ ಹೊಡೆದ ಕಾರು: ಕಿಮೀ ದೂರ ಎಳೆದೊಯ್ದ ಚಾಲಕ

ಟಿಪ್ಪರ್‌ಗೆ ಡಿಕ್ಕಿ ಹೊಡೆದ ಕಾರು: ಕಿಮೀ ದೂರ ಎಳೆದೊಯ್ದ ಚಾಲಕ

0

ಉಡುಪಿ: ಕಾರೊಂದು ಟಿಪ್ಪರ್‌ ಹಿಂಬದಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ಬಳಿಕವೂ ಟಿಪ್ಪರ್ ಕಾರನ್ನು ಕಿಲೋ ಮೀಟರ್‌ಗಟ್ಟಲೇ ದೂರ ಎಳೆದೊಯ್ದ ಘಟನೆ ಉಡುಪಿಯಲ್ಲಿ ನಡೆದಿದೆ.

ಇಲ್ಲಿನ ಕನ್ನಂಗಾರ್ ಬೈಪಾಸ್ ಬಳಿ ಈ ಘಟನೆ ನಡೆದಿದ್ದು, ಟಿಪ್ಪರ್ ಚಾಲಕನಿಗೆ ಇನ್ನೊಂದು ವಾಹನದ ಮೂಲಕ ಮಾಹಿತಿ ನೀಡಿ ಹೆಜಮಾಡಿಯಲ್ಲಿ ನಿಲ್ಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಸ್ಥಳಕ್ಕಾಗಮಿಸಿದ ಪಡುಬಿದ್ರಿ ಪೊಲೀಸರು ಸಮಗ್ರ ತನಿಖೆ ಕೈಗೊಂಡಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಮುಕ್ಕಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Exit mobile version