ಆಸ್ತಿಗಿಂತಲೂ ಸಾಲವೇ ಹೆಚ್ಚು..!

0
16

ಬಾಗಲಕೋಟೆ; ಮುಧೋಳ ಮೀಸಲು ಕ್ಷೇತ್ರದಲ್ಲಿ ಸಚಿವ ಗೋವಿಂದ ಕಾರಜೋಳರ ಕಟ್ಟಾ ಎದುರಾಳಿಯಾಗಿ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅಬಕಾರಿ, ಸಕ್ಕರೆ ಸಚಿವರಾಗಿ ಕಾರ್ಯನಿರ್ವಹಿಸಿರುವ ಅವರು ಈ ಬಾರಿ ಹೇಗಾದರೂ ಮಾಡಿ ಬಿಜೆಪಿಯನ್ನು ಸೋಲಿಸುವ ಸಿದ್ಧತೆಯಲ್ಲಿದ್ದಾರೆ. ಒಂದು ರೂಪಾಯಿ ಸ್ಥಿರಾಸ್ತಿಯನ್ನೂ ಹೊಂದದ ಅವರು ಆಸ್ತಿಗಿಂತಲೂ ಹೆಚ್ಚಿನ ಸಾಲ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಒಟ್ಟು ೧೭.೪೮ ಲಕ್ಷ ರೂ.ಗಳ ಚರಾಸ್ತಿಯನ್ನು ತಿಮ್ಮಾಪುರ ಅವರು ಪತ್ನಿ ಹೆಸರಿನಲ್ಲಿ ೪.೮೩ ಲಕ್ಷ ರೂ.ಗಳ ಚರಾಸ್ತಿ ಹೊಂದಿದ್ದಾರೆ. ಇನ್ನು ತಮ್ಮ ಹೆಸರಿನಲ್ಲಿ ಮುಧೋಳ ತಾಲೂಕು ಉತ್ತೂರಿನಲ್ಲಿ ೯.೨೩ ಎಕರೆ ಭೂಮಿಯನ್ನು ಅವರು ಹೊಂದಿದ್ದು, ಪತ್ನಿ ಹೆಸರಿನಲ್ಲಿ ಆರ್‌ಬಿ ಸಕ್ಕರೆ ಕಾರ್ಖಾನೆಯಲ್ಲಿ ೨೦ ಸಾವಿರ ಮುಖಬೆಲೆ ೧೦ ಶೇರುಗಳನ್ನು ಹೊಂದಿದ್ದಾರೆ. ಇನ್ನು ಸಚಿವ ತಿಮ್ಮಾಪುರ ಅವರ ಹೆಸರಿನಲ್ಲಿ ೩೪.೬೯ ಲಕ್ಷ ರೂ.ಗಳ ಸಾಲವನ್ನು ತಿಮ್ಮಾಪುರ ಅವರು ಹೊಂದಿದ್ದಾರೆ.

Previous articleಎಸ್ಸಾರ್-ರಾಹುಲ್ ಗಾಂಧಿ ಮಾತುಕತೆ
Next articleಕಾಂಗ್ರೆಸ್ ಬೆಂಬಲಿತ ಸಂಪಿಗೆ ರಾಘು ಕೋಟ್ಯಾನ್ ಆತ್ಮಹತ್ಯೆ