Home Advertisement
Home ಆರೋಗ್ಯ ಆರೋಗ್ಯದ ಗಣಿ ‘ಗೆಣಸಿನ ಪಾಯಸ’: ಕೆಮ್ಮು, ಸಕ್ಕರೆ ಕಾಯಿಲೆ ನಿಯಂತ್ರಣ, ಡಯಟ್‌ಗೆ ಇದುವೇ ರಾಮಬಾಣ

ಆರೋಗ್ಯದ ಗಣಿ ‘ಗೆಣಸಿನ ಪಾಯಸ’: ಕೆಮ್ಮು, ಸಕ್ಕರೆ ಕಾಯಿಲೆ ನಿಯಂತ್ರಣ, ಡಯಟ್‌ಗೆ ಇದುವೇ ರಾಮಬಾಣ

0
18

ಈಚೀನ ಶ್ರೀಮಂತ ಬದುಕಿನಲ್ಲಿ ನಾವೆಲ್ಲರೂ ತಕ್ಷಣವೇ ಸಿದ್ಧವಾಗುವ ಆಹಾರಗಳ ಮೊರೆ ಹೋಗುತ್ತಿದ್ದೇವೆ. ಆದ್ರೆ ನಮ್ಮ ಹಿರಿಯರು ಬಳಸುತ್ತಿದ್ದ ಸಾಂಪ್ರದಾಯಿಕ ಗೆಣಸಿನಂತಹ ಗೆಡ್ಡೆ-ಗೆಣಸುಗಳು ಕೇವಲ ರುಚಿಯಷ್ಟೇ ಅಲ್ಲ, ಅಪಾರ ಆರೋಗ್ಯಕಾರಿ ಗುಣಗಳನ್ನು ಹೊಂದಿವೆ. ಇಂದಿನ ದಿನಗಳಲ್ಲಿ ‘ಗೆಣಸಿನ ಪಾಯಸ’ ಅಥವಾ ಗಂಜಿ ಕೇವಲ ಹಬ್ಬದ ಅಡುಗೆಯಾಗಿ ಉಳಿಯದೆ, ಒಂದು ಪೌಷ್ಟಿಕಯುತ ಉಪಹಾರವಾಗಿ ಗಮನ ಸೆಳೆಯುತ್ತಿದೆ.

ಗೆಣಸಿನಲ್ಲಿ ನಾರಿನಂಶ : ಸಮೃದ್ಧವಾಗಿದ್ದು, ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದಕ್ಕೆ ಪೂರಕವಾಗಿ ತೆಂಗಿನ ಹಾಲು ಬಳಸುವುದರಿಂದ ದೇಹಕ್ಕೆ ಅಗತ್ಯವಾದ ಆರೋಗ್ಯಕರ ಕೊಬ್ಬು ಲಭ್ಯವಾಗುತ್ತದೆ. ಈ ರೆಸಿಪಿಯಲ್ಲಿ ವಿಶೇಷವಾಗಿ ಓಟ್ಸ್ ಪುಡಿಯನ್ನು ಬಳಸುವುದರಿಂದ ಪಾಯಸಕ್ಕೆ ಸಾಂದ್ರತೆ ಬರುವುದಲ್ಲದೆ, ಹೃದಯದ ಆರೋಗ್ಯಕ್ಕೂ ಇದು ಪೂರಕವಾಗಿದೆ.

ಮಸಾಲೆಗಳ ಅದ್ಭುತ ಶಕ್ತಿ: ನಾವು ಬಳಸುವ ದಾಲ್ಚಿನ್ನಿ, ಜಾಯಿಕಾಯಿ ಮತ್ತು ಶುಂಠಿ ಕೇವಲ ಸುಗಂಧಕ್ಕಷ್ಟೇ ಸೀಮಿತವಾಗಿಲ್ಲ, ಇವುಗಳು ನಮ್ಮ ರೋಗ್ಯಕ್ಕೂ ಪೂರಕವಾಗಿವೆ. ಇಂತಹ ಮಸಾಲೆಭರಿತ ಕೇಲವು ಉಪಹಾರ ಅಥವಾ ಅಡುಗೆ ಮನೆಯಲ್ಲಿ ಬಳಸುವುದರಿಂದ ಕೆಮ್ಮು, ನೆಗಡೆ, ದೇಹದ ಬ್ಯಾಕ್ಟಿರಿಯಾಗಳನ್ನು ತಡೆಯಲು ಸಹಾಯಮಾಡುತ್ತದೆ.

  • *ಶುಂಠಿ ಮತ್ತು ಜಾಯಿಕಾಯಿ: ಇವುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಶೀತ-ಕೆಮ್ಮಿನಂತಹ ಸಮಸ್ಯೆಗಳಿಂದ ರಕ್ಷಿಸುತ್ತವೆ.
    *ದಾಲ್ಚಿನ್ನಿ: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಸಹಕಾರಿ.
    *ಪಿಂಕ್ ಸಾಲ್ಟ್: ಸಾಮಾನ್ಯ ಉಪ್ಪಿಗಿಂತ ಇದರಲ್ಲಿ ಖನಿಜಾಂಶಗಳು ಹೆಚ್ಚಿದ್ದು, ದೇಹದ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

ಡಯಟ್ ಮಾಡುವವರಿಗೆ ವರದಾನ: ಸಕ್ಕರೆಯ ಅಂಶ ಬೇಡವೆನ್ನುವವರು ಇದನ್ನು ಕೇವಲ ಚಿಟಿಕೆ ಉಪ್ಪು ಅಥವಾ ಅಲ್ಪ ಪ್ರಮಾಣದ ಬೆಲ್ಲದೊಂದಿಗೆ ಸೇವಿಸಬಹುದು. ಗೆಣಸಿನ ನೈಸರ್ಗಿಕ ಸಿಹಿಯೇ ಇದಕ್ಕೆ ಸಾಕು. ತೂಕ ಇಳಿಸಿಕೊಳ್ಳಲು ಬಯಸುವವರು ಬೆಳಗಿನ ಉಪಹಾರಕ್ಕೆ ಈ ಪಾಯಸವನ್ನು ಗಂಜಿಯ ರೂಪದಲ್ಲಿ ಸೇವಿಸಿದರೆ ಮಧ್ಯಾಹ್ನದವರೆಗೆ ಹಸಿವಾಗದಂತೆ ತಡೆಯಬಹುದು.

ತಯಾರಿಸುವ ಸುಲಭ ವಿಧಾನ: ಬೇಯಿಸಿದ ಗೆಣಸನ್ನು ತೆಂಗಿನ ಹಾಲಿನೊಂದಿಗೆ ನಯವಾಗಿ ರುಬ್ಬಿ, ನಂತರ ದಪ್ಪ ತಳದ ಪಾತ್ರೆಯಲ್ಲಿ ಕುದಿಸಬೇಕು. ಮಂದ ಉರಿಯಲ್ಲಿ ಓಟ್ಸ್ ಪುಡಿ ಮತ್ತು ಮಸಾಲೆ ಪದಾರ್ಥಗಳನ್ನು ಸೇರಿಸಿ 15 ನಿಮಿಷ ಬೇಯಿಸಿದರೆ ರುಚಿಕರವಾದ ಪಾಯಸ ಸಿದ್ಧವಾಗುತ್ತದೆ.

ಒಟ್ಟಾರೆ ಆಧುನಿಕತೆಯ ಹೆಸರಿನಲ್ಲಿ ಸಂಸ್ಕರಿಸಿದ ಆಹಾರಗಳನ್ನು ತಿನ್ನುವ ಬದಲು, ಇಂತಹ ನೈಸರ್ಗಿಕ ಮತ್ತು ಪಾರಂಪರಿಕ ಆಹಾರಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಕಡಿಮೆ ವೆಚ್ಚದಲ್ಲಿ ಅತಿ ಹೆಚ್ಚು ಪ್ರೊಟೀನ್ ಮತ್ತು ವಿಟಮಿನ್ ಪಡೆಯಲು ‘ಗೆಣಸಿನ ಪಾಯಸ’ ಒಂದು ಅದ್ಭುತ ಆಯ್ಕೆ.