ಕರ್ನಾಟಕ: 2 ವರ್ಷದಲ್ಲಿ ಹೃದಯಸ್ತಂಭನ ಸಾವು ಮೂರು ಪಟ್ಟು ಹೆಚ್ಚಳ

0
92

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಹೃದಯಸ್ತಂಭನದಿಂದ ಸಾವನ್ನಪ್ಪುವವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಡಾ. ಪುನೀತ್ ರಾಜಕುಮಾರ್ ಹೆಸರಿನಲ್ಲಿ ಸ್ಥಾಪನೆಯಾದ ಹೃದಯಜ್ಯೋತಿ ಯೋಜನೆಯಡಿ ಈ ಅಂಕಿ ಅಂಶಗಳು ಹೊರ ಬಿದ್ದಿದೆ.

2023-24ರ ಅವಧಿಯಲ್ಲಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದವರ ಸಂಖ್ಯೆ 229 ಇದ್ದದ್ದು 2024-25ರ ವೇಳೆಗೆ 608ಕ್ಕೆ ಏರಿಕೆಯಾಗಿದೆ ಎಂದು ಅಧಿವೇಶನದಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನು ಇಸಿಜಿಯಲ್ಲಿಯೂ ಗಂಭೀರ ಹೃದಯ ಖಾಯಿಲೆ ಇದ್ದವರ ಸಂಖ್ಯೆಯಲ್ಲೂ ಏರಿಕೆಯಾಗಿದೆ.23-24 ರಲ್ಲಿ ಕೇವಲ 2489 ಜನರಿಗೆ ಗಂಭೀರತೆ ಇತ್ತು. ಈ ಸಂಖ್ಯೆ ಇದೀಗ 6,767ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಹೃದಯದ ಸಮಸ್ಯೆ ಹೆಚ್ಚಾದಾಗ ಇದನ್ನು ತಡೆಗಟ್ಟಲು ಸರ್ಕಾರ ಡಾ. ಪುನೀತ್ ರಾಜಕುಮಾರ್ ಹೆಸರಿನ ಹೃದಯಜ್ಯೋತಿ ಯೋಜನೆ ಸ್ಥಾಪನೆ ಮಾಡಲಾಯಿತು. ಇದರಿಂದಾಗಿ ಅನೇಕ ಕಡೆಗಳಲ್ಲಿ ಹೆಚ್ಚಿನ ಜನರಿಗೆ ಸಹಾಯವೂ ಆಗಿದೆ.

ನಮ್ಮಲ್ಲೂ ಸಹ ರಾಜ್ಯದಲ್ಲಿ ಹೃದಯಸ್ತಂಭನದಿಂದ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬುದು ನಿಖರ ಮಾಹಿತಿ ಇಲ್ಲ. ಆದರೆ ಈ ಯೋಜನೆ ನೀಡಿದ ಅಂಕಿ ಅಂಶಗಳ ಪ್ರಕಾರ ಇದು ಹೆಚ್ಚಾಗಿದೆ ಮತ್ತು ಹೃದಯಾಘಾತವನ್ನು ಅಧಿಸೂಚಿಸಬಹುದಾದ ಕಾಯಿಲೆ ಎಂದು ಪರಿಗಣಿಸಲು ಆಗುವುದಿಲ್ಲ.

ರಾಜ್ಯದಲ್ಲಿ 45 ವರ್ಷದೊಳಗಿನ ರೋಗಿಗಳಿಗೆ ಹೃದಯಾಘಾತ ಹೆಚ್ಚಾಗಿದೆ ಎನ್ನುವುದರ ಬಗ್ಗೆ ವರದಿಗಳನ್ನು ತರಿಸಿಕೊಂಡು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ಈ ಕುರಿತು ತಜ್ಞರ ಸಮಿತಿಯನ್ನು ರಚಿಸಲಾಯಿತು. ಆ ಸಮಿತಿಯಲ್ಲಿ ಶೇ 75ರಷ್ಟು ಜನರು ಮದ್ಯಪಾರ, ದೂಮಪಾನ ಹಾಗೂ ಇನ್ನಿತರ ಚಟಗಳಿಂದ ಹೃದಯಾಘಾತವಾಗಿ ಸಾವನ್ನಪ್ಪುತ್ತಿದ್ದಾರೆ. ಇದನ್ನು ತಡೆಗಟ್ಟುವುದು ಅವರ ಕೈಯಲ್ಲಿಯೇ ಇದೆ.

ಕಾಲೇಜುಗಳಲ್ಲಿ ಜಾಗೃತಿ: ಹೃದಯಾಘಾತ ತಡೆಗೆ ಕಾಲೇಜು ಮಟ್ಟದಲ್ಲಿಯೇ ಜಾಗೃತಿ ನೀಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ನುರಿತ ತಜ್ಞರು, ಮಾನಸಿಕ ವೈದ್ಯರು ಸೇರಿದಂತೆ ಸಂಬಂಧಿಸಿದ ಅನೇಕರನ್ನು ಕರೆಯಿಸಿ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಯೋಜನೆ ಹಾಕಿ ಕೊಳ್ಳಲಾಗುತ್ತಿದೆ.

ಅಲ್ಲದೇ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಇತರೆ ಜನರಲ್ಲೂ ಸಹ ಜಾಗೃತಿ ಮೂಡಿಸಲು ಯೋಜನೆ ರೂಪಿಸಲಾಗುವುದು. ಇಂತಹ ಕಾರ್ಯಕ್ರಮಗಳ ಮೂಲಕ ಹೃದಯದ ಕಾಯಿಲೆಗಳನ್ನು ತಡೆಗಟ್ಟಲು ಯತ್ನಿಸಲಾಗುವುದು ಎಂದು ಸಚಿವರು ಸದನಕ್ಕೆ ತಿಳಿಸಿದರು.

ಹೃದಯದ ಕಾಯಿಲೆಗಳಿಗೆ ಆಸತ್ರೆಗಳಲ್ಲೂ ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ಜಯದೇವ ಆಸತ್ರೆ, ಕಲಬುರಗಿಯ 16 ಸೂಪರ್ ಸ್ಪೆಷಾಲಿಟಿ ಆಸತ್ರೆಗಳಲ್ಲಿ ಸ್ಟೋಕ್ ವಿಧಾನಗಳನ್ನು ಬಳಸಲಾಗುತ್ತದೆ. ಒಟ್ಟು 85 ಸ್ಟೋಕ್ ಕೇಂದ್ರಗಳಿದ್ದು, ಸಂಪರ್ಕ ಹೊಂದಲಾಗಿದೆ.

ಹೃದಯಾಘಾತದಿಂದ ಮೊದಲು ಆಸತ್ರೆಗೆ ಬರುವ ರೋಗಿಗೆ ಜಿಲ್ಲಾ ಮತ್ತು ತಾಲೂಕು ಆಸತ್ರೆಯಲ್ಲಿ ಸ್ಟೋಕ್‌ ವಿಧಾನದಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಆರಂಭಿಕ ಚಿಕಿತ್ಸೆಯ ನಂತರ ಅಡ್ವಾನ್ಸ್ ಕೇರ್ ಅಗತ್ಯವಿರುವ ರೋಗಿಗಗಳನ್ನು ವಿಶೇಷ ಮಧ್ಯಸ್ಥಿತಿಗೆ ಒಳಪಡಿಸಲಾಗುತ್ತದೆ.

ಕರ್ನಾಟಕ ಸರ್ಕಾರ ಡಾ. ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಆರಂಭಿಸಿದೆ. ಇದು ಹೃದಯದ ಆರೋಗ್ಯ ಕುರಿತು ಅರಿವು ಮೂಡಿಸುವ ಮಹತ್ವದ ಯೋಜನೆಯಾಗಿದೆ. ಹಠಾತ್ ಹೃದಯಾಘಾತ ಮತ್ತು ಹೃದಯದ ಸಮಸ್ಯೆಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ತಕ್ಷಣದ ವೈದ್ಯಕೀಯ ಆರೈಕೆಯನ್ನು ಯೋಜನೆಯಡಿ ಒದಗಿಸಲಾಗುತ್ತದೆ.

Previous articleHebbal Flyover: ಬೆಂಗಳೂರು ಹೆಬ್ಬಾಳ ಫ್ಲೈ ಓವರ್ ಲೋಕಾರ್ಪಣೆ, ಡಿಕೆಶಿ ಬೈಕ್ ರೈಡ್
Next articleಬೆಳಗಾವಿ ಪಾಲಿಕೆ: 4 ಸ್ಥಾಯಿ ಸಮಿತಿಗೆ ಅವಿರೋಧವಾಗಿ ಅಧ್ಯಕ್ಷರ ಆಯ್ಕೆ

LEAVE A REPLY

Please enter your comment!
Please enter your name here