Home Advertisement
Home ಆರೋಗ್ಯ ಡಿಜಿಟಲ್ ಯುಗದಲ್ಲಿ ನಿದ್ರೆಯೇ ಅಮೃತ: ಇಲ್ಲಿದೆ ಉತ್ತಮ ಮಾಹಿತಿ

ಡಿಜಿಟಲ್ ಯುಗದಲ್ಲಿ ನಿದ್ರೆಯೇ ಅಮೃತ: ಇಲ್ಲಿದೆ ಉತ್ತಮ ಮಾಹಿತಿ

0
34

ಈಚೀನ ಜೀವನಶೈಲಿಯಲ್ಲಿ ಜನರು ಎದುರಿಸುತ್ತೀರುವುದು ಕೆಲಸದ ಒತ್ತಡ ಮತ್ತು ಡಿಜಿಟಲ್ ಸಾಧನಗಳ ಅತಿಯಾದ ಬಳಕೆ ಇಂದಿನ ಪೀಳಿಗೆಯಲ್ಲಿ ‘ನಿದ್ರಾಹೀನತೆ’ಯು ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಆಹಾರ ಮತ್ತು ನೀರು ದೇಹಕ್ಕೆ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾದುದು ನಿದ್ರೆ. ನಿದ್ರೆ ಎನ್ನುವುದು ಕೇವಲ ವಿಶ್ರಾಂತಿಯಲ್ಲ, ಬದಲಾಗಿ ನಮ್ಮ ದೇಹ ಮತ್ತು ಮೆದುಳು ತನ್ನನ್ನು ತಾನು ಪುನಶ್ಚೇತನಗೊಳಿಸಿಕೊಳ್ಳುವ (Self-repair) ಅಮೂಲ್ಯ ಸಮಯವಾಗಿದೆ.

ಒಬ್ಬ ಆರೋಗ್ಯವಂತ ವಯಸ್ಕನಿಗೆ ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ಗಾಢ ನಿದ್ರೆ ಅತ್ಯಗತ್ಯ ಎಂದು ವೈದ್ಯಕೀಯ ಲೋಕ ಹೇಳುತ್ತದೆ. ನಿದ್ರೆಯ ಕೊರತೆಯು ಕೇವಲ ಆಯಾಸಕ್ಕೆ ಸೀಮಿತವಾಗದೆ, ದೀರ್ಘಕಾಲದ ಕಾಯಿಲೆಗಳಿಗೆ ದಾರಿಯಾಗುತ್ತದೆ. ಸತತವಾಗಿ ನಿದ್ರೆಯಿಲ್ಲದಿದ್ದರೆ ಮಾನಸಿಕ ಒತ್ತಡ, ಏಕಾಗ್ರತೆಯ ಕೊರತೆ, ಖಿನ್ನತೆ ಮತ್ತು ಹಸಿವನ್ನು ನಿಯಂತ್ರಿಸುವ ಹಾರ್ಮೋನ್‌ಗಳಲ್ಲಿ ಏರುಪೇರಾಗಿ ತೂಕ ಹೆಚ್ಚಳದಂತಹ ಸಮಸ್ಯೆಗಳು ಎದುರಾಗುತ್ತವೆ. ಅಷ್ಟೇ ಅಲ್ಲದೆ ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತದ ಅಪಾಯವೂ ಹೆಚ್ಚುತ್ತದೆ.

ಕೆಲವು ಸರಳ ಬದಲಾವಣೆಗಳ ಮೂಲಕ ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು:

ಡಿಜಿಟಲ್ ಡಿಟಾಕ್ಸ್: ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಮೊಬೈಲ್ ಮತ್ತು ಟಿವಿಯಿಂದ ದೂರವಿರಿ. ಇವುಗಳಿಂದ ಹೊರಬರುವ ‘ನೀಲಿ ಬೆಳಕು’ ನಿದ್ರೆಯ ಹಾರ್ಮೋನ್ ಆದ ಮೆಲಟೋನಿನ್ ಉತ್ಪತ್ತಿಯನ್ನು ತಡೆಯುತ್ತದೆ.

ಸಮಯ ಪಾಲನೆ: ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಮತ್ತು ಏಳುವ ಅಭ್ಯಾಸವು ದೇಹದ ಜೈವಿಕ ಗಡಿಯಾರವನ್ನು (Biological Clock) ಸುಸ್ಥಿತಿಯಲ್ಲಿಡುತ್ತದೆ.

ಆಹಾರ ಕ್ರಮ: ನೀವು ಮಲಗುವಮುನ್ನ 2 ಗಂಟೆ ಮೊದಲು ಲಘು ಆಹಾರ ಸೇವಿಸಬೇಕು. ಹಾಗೇ ಸಂಜೆಯ ನಂತರ ಕೆಫೀನ್ ಯುಕ್ತ ಕಾಫಿ-ಟೀ ಸೇವನೆ ಮಾಡಬಾರದು ಇದರಿಂದ ನಿಮ್ಮ ಜೀವನದ ಪದ್ದತಿಗಳು ದಾರಿತಪ್ಪಿ ಹೋಗುತ್ತವೆ.

ಋಣಾತ್ಮಕ ವಾತಾವರಣ: ಮಲಗುವ ಕೋಣೆ ಶಾಂತವಾಗಿ, ಕತ್ತಲೆಯಿಂದ ಕೂಡಿರಲಿ. ನಿದ್ರೆ ಬರದಿದ್ದರೆ ಒಂದು ಲೋಟ ಉಗುರು ಬೆಚ್ಚಗಿನ ಹಾಲು ಅಥವಾ ಅಶ್ವಗಂಧದ ಹಾಲನ್ನು ಸೇವಿಸುವುದು ಸ್ನಾಯುಗಳನ್ನು ಸಡಿಲಗೊಳಿಸಲು ಸಹಕಾರಿ.

ದಿನವಿಡೀ ದೈಹಿಕವಾಗಿ ಸಕ್ರಿಯವಾಗಿದ್ದು, ಮಲಗುವ ಮುನ್ನ ಲಘು ಪ್ರಾಣಾಯಾಮ ಅಥವಾ ಧ್ಯಾನ ಮಾಡುವುದರಿಂದ ಮೆದುಳು ಶಾಂತಗೊಂಡು ಗಾಢ ನಿದ್ರೆ ಆವರಿಸುತ್ತದೆ. ಉತ್ತಮ ನಿದ್ರೆ ಎಂದರೆ ನಾಳಿನ ಸುಂದರ ಮತ್ತು ಸದೃಢ ದಿನಕ್ಕೆ ನೀವು ನೀಡುವ ಮುನ್ನುಡಿಯಾಗಿದೆ.

ಮನುಷ್ಯ ದಿನನಿತ್ಯ ಈ ಎಲ್ಲ ನಿಯಮಗಳನ್ನ ನಿಮ್ಮ ಜೀವನ ಶೈಲಿಯಲ್ಲಿ ರೂಢಿಸಿಕೊಂಡರೆ ನಿಮ್ಮ ಜೀವನವು ಸುಖಮಯವಾಗಿ ಮತ್ತು ಸುಗಮವಾಗಿರುತ್ತದೆ. ಅಲ್ಲದೇ ಕೆಲವರಿಗೆ ನಿದ್ರೆಯ ಹೆಚ್ಚಿನ ಸಮಸ್ಯ ಇದಲ್ಲಿ ಬೇಗನೆ ತಜ್ಞರನ್ನ ಭೇಟಿಮಾಡಿ.