Home Advertisement
Home ಸಿನಿ ಮಿಲ್ಸ್ ಬಾಲಿವುಡ್‌ನ ಕತ್ತಲೆ ಮುಖ ಬಿಚ್ಚಿಟ್ಟ ರಣವೀರ್; “ನಿನ್ನನ್ನು ಒಮ್ಮೆ ಮುಟ್ಟಲು ಬಿಡು” ಎಂದ ಆತ!

ಬಾಲಿವುಡ್‌ನ ಕತ್ತಲೆ ಮುಖ ಬಿಚ್ಚಿಟ್ಟ ರಣವೀರ್; “ನಿನ್ನನ್ನು ಒಮ್ಮೆ ಮುಟ್ಟಲು ಬಿಡು” ಎಂದ ಆತ!

0
19

ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್ ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ಎದುರಿಸಿದ ಕಠಿಣ ಅನುಭವವೊಂದನ್ನು ಬಹಿರಂಗಪಡಿಸಿದ್ದಾರೆ. ಸಿನಿಮಾ ಅವಕಾಶಕ್ಕಾಗಿ ಒಬ್ಬ ಕಾಸ್ಟಿಂಗ್ ಏಜೆಂಟ್ ತಮ್ಮನ್ನು ಲೈಂಗಿಕವಾಗಿ ಸಹಕರಿಸಲು ಒತ್ತಾಯಿಸಿದ್ದ ಘಟನೆ ಬಗ್ಗೆ ಅವರು ಮಾತನಾಡಿದ್ದಾರೆ.

ರಣವೀರ್ ಸಿಂಗ್ ‘ಬ್ಯಾಂಡ್ ಬಾಜಾ ಬಾರಾತ್’ ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿ, 2012ರೊಳಗೆ ಬಾಲಿವುಡ್‌ನಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡರು. ಇಂದಿಗೆ ಅವರು ಭಾರತೀಯ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದು, ‘ಧುರಂಧರ್’ ಫ್ರಾಂಚೈಸಿ ಮೂಲಕ ದೊಡ್ಡ ಮಟ್ಟದ ಯಶಸ್ಸು ಮತ್ತು ಸಂಪಾದನೆ ಗಳಿಸಿದ್ದಾರೆ. ಆದರೆ ಈ ಯಶಸ್ಸಿನ ಹಿಂದೆ ಸಾಕಷ್ಟು ಸವಾಲುಗಳು ಮತ್ತು ಕಷ್ಟಗಳಿವೆ.

ತಮ್ಮ ಆರಂಭಿಕ ದಿನಗಳಲ್ಲಿ ತಮಗೂ ಕಾಸ್ಟಿಂಗ್ ಕೌಚ್ ಅನುಭವವಾಗಿತ್ತು ಎಂದು ಅವರು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಒಬ್ಬ ಕಾಸ್ಟಿಂಗ್ ಏಜೆಂಟ್ ಗಮನ ಸೆಳೆಯಲು ಉತ್ತಮ ಪೋರ್ಟ್‌ಫೋಲಿಯೋ ತೆಗೆದುಕೊಂಡು ಹೋದರೂ, ಆತ ಅದನ್ನು ನೋಡಲು ಕೂಡ ಸಿದ್ಧನಿರಲಿಲ್ಲ. ಬದಲಿಗೆ ಬೇರೆ ರೀತಿಯ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾನೆ ಎಂದು ರಣವೀರ್ ವಿವರಿಸಿದ್ದಾರೆ.

ಆ ವ್ಯಕ್ತಿ, “ನೀನು ಜಾಣನಾಗಿರಬೇಕು, ಸೆಕ್ಸಿಯಾಗಿರಬೇಕು. ಸ್ಮಾರ್ಟ್ ಮತ್ತು ಸೆ*ಕ್ಸಿಯಾಗಿದ್ದರೆ ಯಾರು ಬೇಕಾದರೂ ಮುಂದೆ ಬರಬಹುದು. ನಾನು ನಿನ್ನನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಬಲ್ಲೆ. ಆಗ ನೀನು ನನಗೆ ಬೇಕಾದ್ದನ್ನು ಕೊಡುತ್ತೀಯಾ?” ಎಂದು ಹೇಳಿದ್ದಾನೆ. ಅಲ್ಲದೆ, “ನಿನ್ನನ್ನು ಒಮ್ಮೆ ಮುಟ್ಟಲು ಬಿಡು” ಎಂದು ಕೂಡ ಕೇಳಿದ್ದಾನೆ ಎಂದು ರಣವೀರ್ ಹೇಳಿದ್ದಾರೆ.

ಈ ಮಾತುಗಳನ್ನು ಕೇಳಿ ಶಾಕ್ ಆದ ರಣವೀರ್, ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ವಾಗ್ವಾದದ ನಡುವೆ ಆ ವ್ಯಕ್ತಿ ಅವರನ್ನು ಮುಟ್ಟಲು ಪ್ರಯತ್ನಿಸಿದರೂ, ರಣವೀರ್ ವಿರೋಧ ವ್ಯಕ್ತಪಡಿಸಿದ ಬಳಿಕ ಆತ ಅಲ್ಲಿಂದ ತೆರಳಿದ್ದಾನೆ. ನಂತರ, ಅದೇ ವ್ಯಕ್ತಿಯಿಂದ ಹಲವರಿಗೂ ಇಂತಹ ಅನುಭವಗಳು ಆಗಿವೆ ಎಂಬುದು ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ.