ಯಾದಗಿರಿ: ಇಲ್ಲಿನ ಸಮಾಜ ಕಲ್ಯಾಣ ಇಲಾಖೆ ದ್ವೀತಿಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಅಂಜಲಿ ಗಿರೀಶ ಕಾಂಬಾನೂರ ಅವರನ್ನು ಹಾಡು ಹಗಲೇ ಭೀಕರ ಹತ್ಯೆಗೆ ಯತ್ನಿಸಿದ ಘಟನೆ ನಗರದ ಚಿತ್ತಾಪುರ ರಸ್ತೆಯಲ್ಲಿ ಬುಧವಾರ ಬೆಳಗ್ಗೆ 10ರ ಸುಮಾರಿಗೆ ನಡೆದಿದೆ.
ಹರಿತವಾದ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದಾಗ ಮುಖ ಸೇರಿದಂತೆಯೇ ಬೇರೆ, ಬೇರೆ ಕಡೆ ಗಂಭೀರ ಗಾಯಗಳಾಗಿವೆ. ಸಾವು, ಬದುಕಿನ ನಡುವೆ ಹೋರಾಡುತ್ತಿವ ಅಂಜಲಿ ಅವರು ಈ ಹಿಂದೆ ಶಹಾಬಾದ ನಗರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿದ್ದರು.
ದಲಿತ ದೌರ್ಜನ ಕಾಯ್ದೆಯಡಿ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಸಿಕ್ಕ ಹಿನ್ನಲೆಯಲ್ಲಿ ಯಾದಗಿರಿ ಸಮಾಜ ಕಲ್ಯಾಣ ಇಲಾಖೆ ಕೆಲಸ ಮಾಡುತ್ತಿದ್ದರು. ಎಂದಿನಂತೆಯೇ ಇಂದು ಕೆಲಸಕ್ಕೆ ಹಾಜರಾಗಲು ಕಾರಿನಲ್ಲಿ ಬರುತ್ತಿದ್ದ ಅಂಜಲಿ ಅವರನ್ನು ಹಿಮ್ಮೆಟ್ಟಿಸಿಕೊಂಡು ಬಂದ ಗ್ರಿನ್ ಸಿಟಿ ಸಮೀಪದ ರಸ್ತೆಯಲ್ಲಿ ದಾಳಿ ಮಾಡಿ ಎಲ್ಲೆಂದರಲ್ಲಿ ಕೊಚ್ಚಿ ಹತ್ಯೆಗೆ ಯತ್ನ ನಡೆದಿದೆ.
ಘಟನೆ ನಡೆದ ತಕ್ಷಣವೇ ಕಾರ್ ಚಾಲಕ ಅಜೀಮಿರ್, ದಾಳಿ ಲೆಕ್ಕಿಸದೇ ಗಾಯಾಳು ಅಂಜಲಿ ಅವರನ್ನು ಯಿಮ್ಸ್ ಆಸ್ಪತ್ರೆಗೆ ಸೇರಿಸಿದಾಗ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗಲಾಗಿದೆ.
ಸ್ಥಿತಿಯಂತು ಗಂಭಿರವಾಗಿದೆ. ಸಾವು ಬದುಕಿನ ನಡುವೆ ಹೋರಾಟ. ಇದು ನಡೆದಿದು ಹಳೆ ದ್ವೇಷವೇ ಕಾರಣ ಎಂದು ಹೇಳಲಾಗುತ್ತಿದೆ. ಕಳೆದ ಕೆಲ ವರ್ಷಗಳ ಹಿಂದೆ ಈಕೆಯ ಗಂಡ ಗಿರೀಶ ಎಂಬುವವರನ್ನು ಶಹಾಬಾದ ನಗರದ ನಡು ರಸ್ತೆಯಲ್ಲಿ ಬೀಕರವಾಗಿ ಹತ್ಯ ಮಾಡಲಾಗಿತ್ತು.ಆಗ ಅಂಜಲಿ ನಗರಸಭೆ ಅಧ್ಯಕ್ಷರಾಗಿದ್ದರು.
ಹಳೆ ವೈಷ್ಯಮ್ಮವೇ ಇದಕ್ಕೆ ಕಾರಣವೆನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಎಸ್ ಪಿ ಪ್ರಥ್ವಿಕ್ ಶಂಕರ್ ಭೇಟಿ ನೀಡಿದ್ದಾರೆ.


























