ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮಾರ್ಷಲ್‌ಗಳು ಸಮರ ಸಾರಿದ್ದು, ಕಾನೂನು ಉಲ್ಲಂಘಿಸಿದವರಿಗೆ ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ. ನಗರದ ಮೈಕೋ ಲೇಔಟ್‌ನಲ್ಲಿ ನಡೆದ ಇಂತಹದ್ದೇ ಒಂದು ಘಟನೆಯಲ್ಲಿ, ರಸ್ತೆ ಬದಿಯಲ್ಲಿ ಕಸ ಎಸೆದು, ಸಿಸಿಟಿವಿ ಕ್ಯಾಮೆರಾ ಮುಂದೆ ಅಧಿಕ ಪ್ರಸಂಗತನ ತೋರಿದ ಇಬ್ಬರು ಯುವತಿಯರಿಗೆ ಪಾಲಿಕೆ ಮಾರ್ಷಲ್‌ಗಳು ತಲಾ 1,000 ರೂ.ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ಹಲವು ದಿನಗಳಿಂದ ಮೈಕೋ ಲೇಔಟ್‌ನ ಮುಖ್ಯರಸ್ತೆ ಬದಿ ರಾತ್ರಿ ವೇಳೆ ಕಸ ಎಸೆಯುವ ಪರಿಪಾಠ ಮುಂದುವರಿದಿತ್ತು. ಇದರಿಂದ ಸ್ಥಳೀಯರಿಗೆ ತೀವ್ರ ಸಮಸ್ಯೆ ಉಂಟಾಗಿತ್ತು. ಕಸ ಎಸೆಯದಂತೆ ಬುದ್ಧಿಮಾತು ಹೇಳಿದ ಸ್ಥಳೀಯರ ವಿರುದ್ಧವೇ ಕೆಲವರು ಕಿಡಿಕಾರಿದ್ದರು. ಇದರಿಂದ ರೋಸಿಹೋದ ಸ್ಥಳೀಯ ನಿವಾಸಿಗಳು, ಕಸ ಎಸೆಯುವವರನ್ನು ಪತ್ತೆ ಹಚ್ಚಿ ಪಾಠ ಕಲಿಸಲು ನಿರ್ಧರಿಸಿ, ಸ್ವತಃ ಆ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದರು.ಅಧಿಕಪ್ರಸಂಗ ಮಾಡಿದ್ದಕ್ಕೆ ಜಿಬಿಎ ಮಾರ್ಷಲ್‌ಗಳಿಂದ ಖಡಕ್ ಎಚ್ಚರಿಕೆ
ಇಬ್ಬರು ಯುವತಿಯರು ಕಸದ ಚೀಲಗಳನ್ನು ರಸ್ತೆಗೆ ಎಸೆದಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ, ಅವರಲ್ಲಿ ಒಬ್ಬ ಯುವತಿ ಸಿಸಿಟಿವಿ ಕ್ಯಾಮೆರಾಗೆ ನೇರವಾಗಿ ಕಾಣುವಂತೆ ಡ್ಯಾನ್ಸ್ ಮಾಡಿ, ಪಾಲಿಕೆಯ ನಿಯಮಗಳನ್ನು ಉಲ್ಲಂಘಿಸಿ ಸವಾಲೆಸೆಯುವ ದುಸ್ಸಾಹಸಕ್ಕೆ ಕೈಹಾಕಿದ್ದಾಳೆ. ಈ ದೃಶ್ಯಗಳನ್ನು ಗಮನಿಸಿದ ಮನೆಯ ಮಾಲೀಕರು ತಕ್ಷಣವೇ ಜಿಬಿಎ ಮಾರ್ಷಲ್‌ಗಳ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ
ರಸ್ತೆಯಲ್ಲಿ ಕಸ ಎಸೆಯುವ ಮೂಲಕ ಜನರಿಗೆ ತೊಂದರೆ ನೀಡಿದ ಮತ್ತು ಪಾಲಿಕೆ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಕ್ಕಾಗಿ ಯುವತಿಯರಿಗೆ ತಲಾ 1,000 ರೂ.ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು. ಮುಂದಿನ ದಿನ ದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮಾರ್ಷಲ್‌ಗಳು ಖಡಕ್ ಸೂಚನೆ ನೀಡಿದ್ದಾರೆ. ನಗರವನ್ನು ಸ್ವಚ್ಛವಾಗಿಡಲು ಸ್ಥಳೀಯರ ಸಹಕಾರ ಅಗತ್ಯವಿದ್ದು, ಕಸ ಎಸೆಯುವವರ ವಿರುದ್ಧ


























