ವಿಜಯಪುರ: ಸಿಂದಗಿ ವ್ಯಾಪ್ತಿಯಲ್ಲಿ ಹಲವು ಬಾರಿ ಭೂಕಂಪನ

0
10

ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದೇ ದಿನದಲ್ಲಿ ಹಲವು ಬಾರಿ ಭೂಕಂಪನದ ಅನುಭವವಾಗಿದೆ.

ಮಧ್ಯಾಹ್ನ 3 ಗಂಟೆ, ರಾತ್ರಿ 10 ಗಂಟೆ 11 ನಿಮಿಷ, 10 ಗಂಟೆ 25ನಿಮಿಷ, 10 ಗಂಟೆ 47 ನಿಮಿಷ, 1 ಗಂಟೆ 21 ನಿಮಿಷ, 2 ಗಂಟೆ, 3 ಗಂಟೆ 06 ನಿಮಿಷ, 4 ಗಂಟೆ 6 ನಿಮಿಷ, 5 ಗಂಟೆ 14 ನಿಮಿಷದ ವೇಳೆಯಲ್ಲಿ ಜೋರಾದ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಈ ಘಟನೆಯಿಂದ ಸಿಂದಗಿ ನಗರದ ಜನರಲ್ಲಿ ಆತಂಕ ಮನೆ ಮಾಡಿದೆ.

ಭೂಕಂಪನದ ಅನುಭವವಾಗುತ್ತಿದ್ದಂತೆ ಸ್ಥಳೀಯ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಬಂದಿದ್ದಾರೆ. ಭೂಕಂಪನದ ತೀವ್ರತೆಯ ಬಗ್ಗೆ ತಕ್ಷಣವೇ ಮಾಹಿತಿ ಲಭ್ಯವಾಗಿಲ್ಲ. ಯಾವುದೇ ಜೀವಹಾನಿ ಮತ್ತು ಆಸ್ತಿ ಹಾನಿಯ ವರದಿಗಳು ಇದುವರೆಗೆ ಬಂದಿಲ್ಲ.

ಎರಡು ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯಲ್ಲಿ ಸರಣಿ ರೂಪದಲ್ಲಿ ಭೂಕಂಪನಗಳು ಸಂಭವಿಸಿದ್ದವು, ಇದರಿಂದ ಸ್ಥಳೀಯರು ಆತಂಕಗೊಂಡಿದ್ದರು. ಆದರೆ ಗಮನಾರ್ಹ ಹಾನಿಯಾಗಿರಲಿಲ್ಲ. ಈಗ ಮತ್ತೆ ಸಿಂದಗಿಯಲ್ಲಿ ಒಂದೇ ದಿನದಲ್ಲಿ ಹಲವು ಬಾರಿ ಭೂಮಿ ಕಂಪಿಸಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

Previous articleಹಾಸನ: ಇನ್‌ಸ್ಟಾಗ್ರಾಮ್‌ ವಿಡಿಯೋದಿಂದ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ!
Next articleನ್ಯೂಯಾರ್ಕ್ ಅಲ್ಬನಿಯಲ್ಲಿ ಪ್ರಧಾನಿ ಮೋದಿ ಜನ್ಮದಿನ ಆಚರಣೆ

LEAVE A REPLY

Please enter your comment!
Please enter your name here