Home ನಮ್ಮ ಜಿಲ್ಲೆ ಉತ್ತರ ಕನ್ನಡ ದಾಂಡೇಲಿ ನಗರದಲ್ಲಿ ಅತಿಕ್ರಮಣ: ವಿವರಣೆ ಕೇಳಿದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

ದಾಂಡೇಲಿ ನಗರದಲ್ಲಿ ಅತಿಕ್ರಮಣ: ವಿವರಣೆ ಕೇಳಿದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

0
107

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರಸಭೆ ಭೂಹಗರಣಗಳಿಗೆ, ಬೋಗಸ್ ಆಶ್ರಯ ಪಟ್ಟಾ ಪಡೆದು ನಿವೇಶನ ಕಬಳಿಕೆಗೆ ಪ್ರಸಿದ್ಧಿ ಪಡೆದಿದೆ. ಈಗಾಗಲೇ ಲೋಕಾಯುಕ್ತದಲ್ಲಿ 1600 ಅಕ್ರಮ ನಿವೇಶನ, ಆಶ್ರಯ ಸೈಟುಗಳ ವಿಚಾರಣೆಯನ್ನು ಪ್ರಾರಂಭಿಸಿದ್ದು, ನಗರಾಡಳಿತಕ್ಕೆ ಬಿಸಿ ಮುಟ್ಟಿಸಿದೆ.

ನಗರಸಭಾಧ್ಯಕ್ಷ ಮತ್ತು ನಗರಸಭೆ ಸದಸ್ಯರ ಆಡಳಿತಾವಧಿ ನವಂಬರ 2 ಕ್ಕೆ ಮುಗಿದಿದ್ದು, ಜಿಲ್ಲಾಧಿಕಾರಿಗಳನ್ನು ಸರ್ಕಾರ ಆಡಳಿತಾಧಿಕಾರಿಯನ್ನಾಗಿ ನೇಮಿಸಿದೆ. ನಗರಸಭೆ ಜನಪ್ರತಿನಿಧಿಗಳ ಆಡಳಿತ ಮುಗಿಯುತ್ತಿದ್ದಂತೆ ಅತಿಕ್ರಮಣ, ಆಕ್ರಮ ಕೆಲಸಗಳಿಗೆ ಬ್ರೇಕ್ ಬೀಳುತ್ತದೆಂದು ನೀರಿಕ್ಷಿಸುತ್ತಿದ್ದ ಜನತೆಗೆ,

ನಗರಸಭೆ ಅಧಿಕಾರಿ ಮತ್ತು ಸಿಬ್ಬಂಧಿಗಳ ಸಹಕಾರದೊಂದಿಗೆ ನಗರದ ಟೌನ್ ಶಿಪ್ ನ ದಿನಕರ ದೇಸಾಯಿ ಉದ್ಯಾನವನದ ಹತ್ತಿರ ಬೆಲೆ ಬಾಳುವ ಸೈಟೊಂದನ್ನು (40 x 40) ಅತಿಕ್ರಮಿಸಿ ಬೇಲಿ ಹಾಕಲಾಗಿದೆ ಎಂದು ಮಾಜಿ ದಾಂಡೇಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಾನಂದ ಗಗ್ಗರಿ ಅವರು ಜಿಲ್ಲಾಧಿಕಾರಿ ಅವರಿಗೆ ತುರ್ತು ಸಂದೇಶ ಕಳಿಸಿ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ತಹಶೀಲದಾರ ಮತ್ತು ಪೌರಾಯುಕ್ತರಿಗೆ ತಕ್ಷಣ ಪರಿಶೀಲನೆ ನಡೆಸಿ ಅತಿಕ್ರಮಣ ತೆರವಿಗೆ ಸೂಚಿಸಿದ್ದಾರೆ. ಸದರಿ ಅತಿಕ್ರಮಣವನ್ನು ಸ್ಥಳೀಯ ಯು ಟ್ಯೂಬರ್ ನೊಬ್ಬ ಮಾಧ್ಯಮ ಪ್ರತಿನಿಧಿಯೆಂದು, ತಾನು ಏನು ಮಾಡಿದರೂ ನಡೆಯುತ್ತೆ ಎನ್ನುವ ಧೈರ್ಯದ ಮೇಲೆ ನಗರಸಭಾ ಸಿಬ್ಬಂಧಿಗಳ ಸಹಕಾರದೊಂದಿಗೆ ಮಾಡಿದ್ದಾರೆಂದು ಗಗ್ಗರಿ ಆರೋಪಿಸಿದ್ದಾರೆ.

ಈ ಅತಿಕ್ರಮಣ ತೆರವುಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ ನ್ನಲಾಗಿದೆ. ಈ ಕುರಿತು ಪೌರಾಯುಕ್ತರನ್ನು ಕೇಳಿದಾಗ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. ಅತಿಕ್ರಮಣ ಖುಲ್ಲಾ ಪಡಿಸದೇ ಹೋದರೆ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನಾ ಸತ್ಯಾಗ್ರಹ ಮಾಡುವುದಾಗಿ ಗಗ್ಗರಿ ಎಚ್ಚರಿಕೆ ನೀಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here