Home Advertisement
Home ನಮ್ಮ ಜಿಲ್ಲೆ ಉಡುಪಿ ಉಡುಪಿ: ಡಿಜೆ ಮರ್ವಿನ್ ಕಾರು ಅಪಘಾತಕ್ಕೆ ಬಲಿ

ಉಡುಪಿ: ಡಿಜೆ ಮರ್ವಿನ್ ಕಾರು ಅಪಘಾತಕ್ಕೆ ಬಲಿ

0
260

ಉಡುಪಿ: ಕಾಪು ಸಮೀಪದ ಮೂಳೂರು ಬಳಿ ಶನಿವಾರ ಮುಂಜಾನೆ ಸಂಭವಿಸಿದ ಕಾರು ಅಪಘಾತದಲ್ಲಿ ಯುವ ಡಿಜೆ ಮರ್ವಿನ್ ಮೆಂಡೋನ್ಸಾ (35) ಸಾವನ್ನಪ್ಪಿದ್ದಾರೆ.

ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಇತರ ಮೂವರೊಂದಿಗೆ ಉಡುಪಿಯಿಂದ ಮಂಗಳೂರು ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾಪು ಸಮೀಪದ ಮೂಳೂರು ಬಳಿ ನಾಯಿಯೊಂದು ಕಾರಿಗೆ ಅಡ್ಡ ಬಂದಾಗ ಅದನ್ನು ತಪ್ಪಿಸಲು ಯತ್ನಿಸಿದಾಗ ಕಾರು ಪಲ್ಟಿ ಹೊಡೆದು ಅಪಘಾತ ಸಂಭವಿಸಿದೆ.

ಗಾಯಗೊಂಡ ಪ್ರಜ್ವಲ್, ಪ್ರಸಾದ್ ಹಾಗೂ ವಿಘ್ನೇಶ್ ಎಂಬವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here