ಬೆಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ನಾಗರಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (POK) ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಆಪರೇಷನ್ ಸಿಂಧೂರ್ ಬಗ್ಗೆ ಪಾಕಿಸ್ತಾನ ಗೊಂದಲಮಯ ಹೇಳಿಕೆ ನೀಡುತ್ತಲೆ ಬಂದಿವೆ. ಇಂದು ಬೆಂಗಳೂರಿನಲ್ಲಿ ಏರ್ಚೀಫ್ ಮಾರ್ಷಲ್ ಅಧಿಕೃತ ಹೇಳಿಕೆ ನೀಡಿದ್ದಾರೆ.
ಭಾರತೀಯ ಪಡೆಗಳು ಆಪರೇಷನ್ ಸಿಂಧೂರದ ಕಾರ್ಯಾಚರಣೆಯ ಸಮಯದಲ್ಲಿ 5 ಪಾಕಿಸ್ತಾನಿ ಫೈಟರ್ ಜೆಟ್ ಹಾಗೂ 1 ಬೃಹತ್ ವಿಮಾನವನ್ನು ಹೊಡೆದುರುಳಿಸಿವೆ. ಶಹಬಾಜ್ ಜಕೋಬಾಬಾದ್ ವಾಯುನೆಲೆಯಲ್ಲಿ ನಿಲ್ಲಿಸಲಾಗಿದ್ದ ಪಾಕಿಸ್ತಾನಿ ವಾಯುಪಡೆಯ ಕೆಲವು F-16 ಫೈಟರ್ ಜೆಟ್‌ಗಳನ್ನು ಸಹ ನಾಶಪಡಿಸಲಾಗಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಎ. ಪಿ. ಸಿಂಗ್ ಮಾಹಿತಿ ನೀಡಿದ್ದಾರೆ.
ಆಪರೇಷನ್ ಸಿಂಧೂರ್ ಸಂಧರ್ಭದಲ್ಲಿ 5 ಪಾಕಿಸ್ತಾನಿ ಫೈಟರ್ ಜೆಟ್‌ಗಳು ಮತ್ತು ಪಾಕಿಸ್ತಾನಿ ವಾಯುಪಡೆಯ ಒಂದು ದೊಡ್ಡ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಹೇಳಿಕೆ ನೀಡಿದ್ದಾರೆ. ಶಹಬಾಜ್ ಜಕೋಬಾಬಾದ್ ವಾಯುನೆಲೆಯಲ್ಲಿ ಪಾಕಿಸ್ತಾನಿ ವಾಯುಪಡೆಯ ಕೆಲವು F-16 ಫೈಟರ್ ಜೆಟ್‌ಗಳು ಸಹ ನಾಶವಾಗಿವೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಆಪರೇಷನ್ ಸಿಂಧೂರ್ ಸಮಯದಲ್ಲಿ ಮುರಿಯ್ ಮತ್ತು ಚಕ್ಲಾಲಾದಂತಹ ಎರಡು ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಸಹ ಹಾನಿಗೊಳಗಾಗಿವೆ ಎಂದಿದ್ದಾರ.
ಒಂದು ದೊಡ್ಡ ವಿಮಾನವನ್ನು ಕೂಡ ಹೊಡೆದುರುಳಿಸಲಾಗಿದ್ದು, ELINT ಏರ್ಕ್ರಾಫ್ಟ್ ಅಥವಾ AWACS (ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆಗೆ) ಸೇರಿದ ದೊಡ್ಡ ವಿಮಾನವನ್ನು ಕೇವಲ 300 ಕಿಲೋ ಮೀಟರ್ ದೂರದಿಂದಲೇ ಹೊಡೆದುರುಳಿಸಲಾಗಿದೆ. ಭೂಮಿಯಿಂದ ಗಾಳಿಯಲ್ಲಿ ಹೊಡೆದುರಳಿಸಿದಂತಹ ದೊಡ್ಡ ವಿಮಾನ ಅಂತ ಇದು ದಾಖಲಾಗಿದೆ. ಭಾರತ ಇತ್ತೀಚೆಗೆ ಖರೀದಿಸಿದ್ದ S-400 ವಾಯು ರಕ್ಷಣಾ ವ್ಯವಸ್ಥೆಯನ್ನು ಶ್ಲಾಘಿಸಿದ ಅವರು, ಆಪರೇಷನ್ ಸಿಂಧೂರ್ ಸಮಯದಲ್ಲಿ ಅದು ಅದ್ಭುತ ಕೆಲಸ ಮಾಡಿದೆ ಎಂದು ಹೇಳಿದ್ದಾರೆ. ಹಾಗೇ S-400ಗಳನ್ನು “ಗೇಮ್-ಚೇಂಜರ್” ಎಂದು ಅವರು ಕರೆದಿದ್ದಾರೆ.
ನಾವು ದಾಳಿ ಮಾಡುವಾಗ ಪಾಕಿಸ್ತಾನದ ಮುರಿಡ್ಕೆಯಲ್ಲಿರುವ ಲಷ್ಕರ್-ಇ-ತೊಯ್ಬಾದ ಕೇಂದ್ರ ಕಚೇರಿ ಮೇಲೆ ಅಟ್ಯಾಕ್ ಮಾಡಲಾಗಿದೆ. ನಾವು ಕೇವಲ ಸ್ಯಾಟಲೈಟ್ ಫೋಟೋಗಳನ್ನು ತೋರಿಸುತ್ತಿಲ್ಲ. ಆಪರೇಷನ್ ಸಿಂಧೂರ್ ಸಮಯದಲ್ಲಿ ಮುರಿಡ್ಕೆ-ಲಷ್ಕರ್-ಎ-ತೈಬಾ ಪ್ರಧಾನ ಕಚೇರಿಯ ಮೇಲಿನ ದಾಳಿಯ ಮೊದಲು ಮತ್ತು ನಂತರದ ಫೋಟೋಗಳನ್ನು ಕೂಡ IAF ಮುಖ್ಯಸ್ ಎಪಿ ಸಿಂಗ್ ತೋರಿಸಿದ್ದಾರೆ. ಪಾಕಿಸ್ತಾನದವರು ಯಾವುದೇ ಬಾಂಬ್ಗಳನ್ನು ಬಳಸುವುದಕ್ಕೆ ಸಾಧ್ಯವಾಗಿಲ್ಲ. ನಮ್ಮ ಸೇನೆಯ ಬಲ ಭೇದಿಸಲು ಸಾಧ್ಯವಾಗದ ಕಾರಣ ಯಾವುದನ್ನು ಅವರು ಬಳಕೆ ಮಾಡಲಿಲ್ಲ ಎಂದು ಹೇಳಿದ್ದಾರೆ.
ಭಾರತದ ರಾಜಕೀಯ ನಾಯಕತ್ವವನ್ನು ಕೂಡ ಶ್ಲಾಘಿಸಿದ್ದಾರೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಪಡೆಗಳ ಯಶಸ್ಸಿಗೆ ಇದು ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಭಾರತೀಯ ಪಡೆಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಯಿತು, ಸರ್ಕಾರದಿಂದ ಅವುಗಳ ಮೇಲೆ ಯಾವುದೇ ನಿರ್ಬಂಧಗಳನ್ನು ವಿಧಿಸಲಿಲ್ಲ. ಇದರಿಂದ ಆಪರೇಷನ್ ಮತ್ತಷ್ಟು ಯಶಸ್ವಿಯಾಯಿತು ಎಂದಿದ್ದಾರೆ.