ಚಾಮುಂಡೇಶ್ವರಿ ಕಾಂಗ್ರೆಸ್ ಸರ್ಕಾರಕ್ಕೆ ಒಳ್ಳೆ ಬುದ್ಧಿ ಕೊಡಲಿ

1
38

“ಚಾಮುಂಡೇಶ್ವರಿ ತಾಯಿಯ ದರ್ಶನ ಮಾಡಿ, ಪ್ರಾರ್ಥನೆ ಸಲ್ಲಿಸಿದ್ದೇನೆ. ಕಾಂಗ್ರೆಸ್ ಸರ್ಕಾರಕ್ಕೆ ಒಳ್ಳೆ ಬುದ್ದಿ ಕೊಡಲಿ” ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, “ಹಿಂದೂ ಶ್ರದ್ಧಾ ಕೇಂದ್ರ ಟಾರ್ಗೆಟ್ ಮಾಡುವ ಮನಸ್ಥಿತಿ ತೆಗೆದು ಹಾಕಲಿ. ಹಿಂದೂಗಳ ಭಾವನಗೆ ಧಕ್ಕೆ ತರದಂತೆ ಬುದ್ಧಿ ಕೊಡಲಿ ಎಂದು ಬೇಡಿದ್ದೇನೆ” ಎಂದು ತಿಳಿಸಿದರು.

ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಮುಷ್ತಾಕ್ ಇಲ್ಲ, ಯಾವಕ್ಕಾನೋ ಗೊತ್ತಿಲ್ಲ. ದಸರಾ ಸಾವಿರಾರು ವರ್ಷಗಳ ಸಂಪ್ರದಾಯ. ಇಲ್ಲಿ ಬರುವವರು ಚಾಮುಂಡೇಶ್ವರಿ ತಾಯಿ ಪೂಜಿಸುತ್ತಾರೆ. ಮೊದಲು ತಾಯಿಗೆ ಭಕ್ತಿ ಇದೆ ಎಂದು ಒಪ್ಪಿಕೊಳ್ಳಬೇಕು” ಎಂದರು.

“ಕನ್ನಡವನ್ನು ಭುವನೇಶ್ವರಿ ಮಾಡಿದ್ದೀರಾ, ಅರಿಶಿನ ಕುಂಕುಮ ಬಣ್ಣದ ಧ್ವಜ ಮಾಡಿದ್ದೀರಾ, ನಾವು ಭುವನೇಶ್ವರಿ ಒಪ್ಪಿಕೊಳ್ಳುವುದಿಲ್ಲ ಎಂದಿದ್ದರು. ಭುವನೇಶ್ವರಿ ಒಪ್ಪದಿದ್ದ ಮೇಲೆ ಚಾಮುಂಡೇಶ್ವರಿ ಹೇಗೆ ಒಪ್ಪುತ್ತಾರೆ?” ಎಂದು ಆರ್.ಅಶೋಕ ಪ್ರಶ್ನಿಸಿದರು.

ಮುಖ್ಯಮಂತ್ರಿಗಳ ಹೇಳಿಕೆ: ಭಾನುವಾರ ಮೈಸೂರಿನಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸುವುದನ್ನು ಧರ್ಮಾಂದರು ಮಾತ್ರ ವಿರೋಧಿಸುತ್ತಾರೆ, ಇತಿಹಾಸ ತಿಳಿಯದ ಬಿಜೆಪಿ ನಾಯಕರು ವಿರೋಧ ಮಾಡಬೇಕೆಂದು ವಿರೋಧ ಮಾಡುತ್ತಿದ್ದಾರೆ” ಎಂದರು.

“ಕನ್ನಡಾಂಬೆಯ ಬಗ್ಗೆ ಬಾನು ಮುಷ್ತಾಕ್ ಅವರು ನೀಡಿರುವ ಹಳೆ ಹೇಳಿಕೆಗೂ ಈಗ ದಸರಾ ಉದ್ಘಾಟನೆಗೂ ಆಹ್ವಾನಿಸಿರುವುದಕ್ಕೂ ಏನು ಸಂಬಂಧ?, ಯಾವತ್ತೋ ಏನು ಹೇಳಿದ್ದಾರೆ? ಎಂದು ಅದನ್ನು ದಸರಾಗೆ ಲಿಂಕ್ ಮಾಡುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದರು.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಮಾಡಿರುವುದನ್ನು ಸಮರ್ಥಿಸಿಕೊಂಡು, “ಈ ಆಯ್ಕೆ ವಿಚಾರದಲ್ಲಿ ಬಿಜೆಪಿ ನಾಯಕರು ಕುಂಟು ನೆಪ ಹುಡುಕುತ್ತಿದ್ದಾರೆ. ದಸರಾ ಉನ್ನತ ಸಮಿತಿ ಸಭೆಯಲ್ಲಿ ದಸರಾ ಉದ್ಘಾಟಕರ ಆಯ್ಕೆ ವಿಚಾರವನ್ನು ನನಗೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಸಾಹಿತಿ ಬಾನು ಮುಷ್ತಾಕ್ ಆಯ್ಕೆ ಮಾಡಿದ್ದೇನೆ” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

“ನಾಡ ಹಬ್ಬ ದಸರಾ ಮಹೋತ್ಸವ ಎಲ್ಲಾ ಜಾತಿ-ಧರ್ಮಕ್ಕೆ ಸೇರಿದ ಧರ್ಮಾತೀತವಾದ ಹಬ್ಬವಾಗಿದೆ, ದಸರಾ ಉದ್ಘಾಟನೆಗೆ ಧರ್ಮದ ಲೇಪನ ಮಾಡುವುದು ಸರಿಯಲ್ಲ. ಕನ್ನಡ ತಾಯಿಯ ಬಗ್ಗೆ ಗೌರವ, ಅಭಿಮಾನ, ಪ್ರೀತಿ ಇಲ್ಲದೆ ಕನ್ನಡದಲ್ಲಿ ಬರೆಯುತ್ತಾರೆಯೇ?, ಬಿಜೆಪಿಯವರು ರಾಜಕೀಯವಾಗಿ ಮಾತನಾಡುತ್ತಾರೆಯೇ ಹೊರತಾಗಿ ಜಾತ್ಯಾತೀತವಾಗಿ ಮಾತನಾಡುವುದಿಲ್ಲ” ಎಂದು ಸಿದ್ದರಾಮಯ್ಯ ಟೀಕಿಸಿದರು.

ಜನ ಸಾಹಿತ್ಯ ಸಮ್ಮೇಳನದಲ್ಲಿ ನಾನು ಮುಷ್ತಾಕ್ ಅವರು ಕನ್ನಡ ತಾಯಿಯ ಬಗ್ಗೆ ಗೌರವವಿಲ್ಲದೆ ಮಾತನಾಡಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, “ಕನ್ನಡ ತಾಯಿಯ ಬಗ್ಗೆ ಗೌರವ, ಅಭಿಮಾನ, ಪ್ರೀತಿ ಇಲ್ಲದೆ ಕನ್ನಡದಲ್ಲಿ ಬರೆಯುತ್ತಾರೆಯೇ?” ಎಂದರು.

Previous articleಉತ್ತರ ಕನ್ನಡ: ಕೇಣೆ ಬಂದರು ಯೋಜನೆಗೆ ತೀವ್ರ ವಿರೋಧ – ಮುಂದೇನು?
Next articleಎಜುಕೇಟ್ ಗರ್ಲ್ಸ್‌ಗೆ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ

1 COMMENT

  1. ಎಂದೋ ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆಂದು ದಸರಾ ಉದ್ಘಾಟನೆಗೆ ತಳುಕು ಹಾಕುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ಮಾತನ್ನು ಎಲ್ಲಾ ಸಮಯದಲ್ಲೂ ಒಪ್ಪುತ್ತಾರಾ ಸಿದ್ದರಾಮಯ್ಯ. ಕೇವಲ ಮುಸಲ್ಮಾನರ ಓಟ್ ಬ್ಯಾಂಕ್ ರಾಜಕಾರಣ ಮಾಡುವ ಸಲುವಾಗಿ ಬಾನು ಮುಷ್ತಾಕ್ ರನ್ನು ಉಪಯೋಗಿಸುವ ಸಿದ್ದರಾಮಯ್ಯನವರಿಗೆ ಬೂಕರ್ ಪ್ರಶಸ್ತಿ ಬಂದಿರುವುದು ದೀಪಾ ಬಸ್ತಿಯವರ ಬರವಣಿಗೆಗೆ ಅನ್ನುವ ಕನಿಷ್ಠ ಜ್ಞಾನವೂ ಇಲ್ಲವಾಯಿತಲ್ಲಾ. ಆ ಬರವಣಿಗೆಯಲ್ಲಿ ಬಾನು ಮುಷ್ತಾಕ್ ರವರ ಸ್ವಂತ ಒಂದಕ್ಷರವೂ ಇಲ್ಲದೆ.ಕೇವಲ ದೀಪಾ ಬಸ್ತಿಯವರ ಬರವಣೀಗೆಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಅನ್ನುವುದನ್ನು ಬಿಟ್ಟರೆ ಅದರಲ್ಲಿ ಆ ವ್ಯಕ್ತಿಯನ್ನು ಆಕಾಶದಲ್ಲಿ ಮೆರೆಸಿ ಮುಸಲ್ಮಾನರ ಓಟ್ ಭದ್ರಪಡಿಸಿಕೊಳ್ಳಲು ವಿ ಕುತಂತ್ರದಿಂದ 420 ವರ್ಷಗಳಿಂದ ನಡೆದು ಬಂದ ಸಂಪ್ರದಾಯವನ್ನು ತಿರುಚುವ ಕುಯುಕ್ತಿ ಎದ್ದು ಕಾಣುತ್ತದೆ. ಕಟ್ಟರ್ ಇಸ್ಲಾಮಿಕಳಾದ ಬಾನು ಮುಷ್ತಾಕ್ ರವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಯಾರನ್ನು ಪೂಜಿಸುತ್ತಾರೆ. ತಾಯಿ ಭುವನೇಶ್ವರಿಗೆ ಅವಮಾನ ಮಾಡಿದ ಬಾನು ಮುಷ್ತಾಕ್ ಚಾಮುಂಡೇಶ್ವರಿಯನ್ನು ಏನೆಂದು ಸಂಬೋಧಿಸುತ್ತಾರೆ. ಇಸ್ಲಾಂ ಧರ್ಮದಲ್ಲಿ ಮೂರ್ತಿ ಮತ್ತು ವಿಗ್ರಹ ಪೂಜೆ ನಿಷಿದ್ಧ ಅಂತಹುದರಲ್ಲಿ ಅವರು ಚಾಮುಂಡೇಶ್ವರಿಯನ್ನು ಪೂಜಿಸಿ ಧರ್ಮ ಭ್ರಷ್ಟರಾಗುತ್ತಾರಾ. ಅದಿಲ್ಲದಿದ್ರೆದರೆ ಇನ್ನಾವ ಪುರುಷಾರ್ಥಕ್ಕಾಗಿ ಆಕೆಯಿಂದ ದಸರಾ ಮಹೋತ್ಸವವನ್ನು ಉದ್ಘಾಟಿಸಬೇಕು. ಇದೊಂದು ಭ್ರಷ್ಟ ಪರಂಪರೆಗೆ ನಾಂದಿಯಾಗದಿರಲಿ ಸಿದ್ದರಾಮಯ್ಯ.

LEAVE A REPLY

Please enter your comment!
Please enter your name here