ಸಂ.ಕ. ಸಮಾಚಾರ ಮೈಸೂರು: ಮೊದಲ ಮಗು ವಿಕಲಚೇತನ ಹಾಗೂ ಎರಡನೇ ಮಗು ಹೆಣ್ಣು ಎಂಬ ಕಾರಣಕ್ಕಾಗಿ ಹೆತ್ತಮ್ಮನೆ ಎರಡು ಮಕ್ಕಳ ಕತ್ತು ಕೊಯ್ದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮೈಸೂರು ಜಿಲ್ಲೆ ಬೆಟ್ಟದಪುರದಲ್ಲಿ ಶನಿವಾರ ನಡೆದಿದೆ.
ಬೆಟ್ಟದಪುರ ನಿವಾಸಿ ಅರೆಬಿಯಾ ಬಾನು(೨೫) ಎರಡೂವರೆ ವರ್ಷದ ವಿಕಲಚೇತನ ಮಗು ಅನುಂ ಪಾತಿಮಾ, ಎಂಟು ದಿನಗಳ ಹೆಣ್ಣು ಹಸುಗೂಸುವಿನ ಕತ್ತು ಕೂಯ್ದು ತಾನು ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊದಲ ಮಗಳು ವಿಕಲಚೇತನರಾಗಿದ್ದು ಎರಡನೇ ಮಗು ಸಹ ಹೆಣ್ಣಾಗಿದ್ದರಿಂದ ಚಿಂತೆಗೆ ಒಳಗಾಗಿದ್ದಳು.
ಹೆಣ್ಣು ಮಕ್ಕಳ ಲಾಲನೆ ಪಾಲನೆ ಕಷ್ಟ ಎಂದು ಭಾವಿಸಿ ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಕೆಯ ಪತಿ ಬೆಂಗಳೂರಿನ ಸೂಪರ್‌ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


























