ದಸರಾ 2025ರ ತಯಾರಿ ಜೋರಾಗಿದೆ. ದಸರಾ ಸಮಯದಲ್ಲಿ ಸಾವಿರಾರು ಜನರು ಮೈಸೂರಿಗೆ ಪ್ರಯಾಣ ಮಾಡುತ್ತಾರೆ. ಆದ್ದರಿಂದ ಜನರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಿಶೇಷ ರೈಲುಗಳ ಘೋಷಣೆ ಮಾಡಿದೆ.
ಬೆಂಗಳೂರು ಮತ್ತು ಮೈಸೂರು ನಡುವೆ ವಿಶೇಷ ರೈಲುಗಳು ಸಂಚಾರವನ್ನು ನಡೆಸಲಿದೆ. ದಸರಾ ಹಬ್ಬದ ಸಮಯದಲ್ಲಿ ಬೆಂಗಳೂರು ನಗರದಿಂದ ಮೈಸೂರಿಗೆ ಹೋಗುವ ಯೋಜನೆ ಇದ್ದರೆ ರೈಲಿನಲ್ಲಿ ಸಂಚಾರ ನಡೆಸಬಹುದು.
ನೈಋತ್ಯ ರೈಲ್ವೆ ಉಭಯ ನಗರದ ನಡುವೆ ಒಟ್ಟು 6 ರೈಲುಗಳನ್ನು ಓಡಿಸಲಿದೆ. ಈ ರೈಲುಗಳು ಸೆಪ್ಟೆಂಬರ್ 27 ಅಕ್ಟೋಬರ್ 2ರ ತನಕ ಸಂಚಾರ ನಡೆಸಲಿವೆ. ವಿಶೇಷ ರೈಲುಗಳ ವೇಳಾಪಟ್ಟಿ ಮಾಹಿತಿ ಇಲ್ಲಿದೆ…
- ರೈಲು ಸಂಖ್ಯೆ 06283 (ಎಸ್.ಎಂ.ವಿ.ಟಿ ಬೆಂಗಳೂರು –ಮೈಸೂರು) ಸೆಪ್ಟೆಂಬರ್ 27ರಿಂದ ಅಕ್ಟೋಬರ್ 2ರ ವರೆಗೆ ಬೆಳಗ್ಗೆ 04:30ಕ್ಕೆ ಹೊರಟು ಅದೇ ದಿನ ಬೆಳಗ್ಗೆ 07:50ಕ್ಕೆ ಮೈಸೂರು ತಲುಪುತ್ತದೆ.
- ರೈಲು ಸಂಖ್ಯೆ 06284 (ಮೈಸೂರು – ಕೆ.ಎಸ್.ಆರ್. ಬೆಂಗಳೂರು) ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 2ರ ವರೆಗೆ ಬೆಳಿಗ್ಗೆ 8 ಕ್ಕೆ ಹೊರಡುವ ಈ ರೈಲು ಅದೇ ದಿನ ಬೆಳಿಗ್ಗೆ 10:50 ಕ್ಕೆ ಕೆ.ಎಸ್.ಆರ್ ಬೆಂಗಳೂರು ತಲುಪುತ್ತದೆ.
- ರೈಲು ಸಂಖ್ಯೆ 06285 (ಕೆ.ಎಸ್.ಆರ್ ಬೆಂಗಳೂರು –ಅಶೋಕಪುರಂ) ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 2ರ ವರೆಗೆ ಬೆಳಗ್ಗೆ 11ಕ್ಕೆ ಹೊರಟು ಅದೇ ದಿನ ಮಧ್ಯಾಹ್ನ 02:15ಕ್ಕೆ ಮೈಸೂರಿನ ಅಶೋಕಪುರಂ ತಲುಪುತ್ತದೆ.
- ರೈಲು ಸಂಖ್ಯೆ 06286 (ಅಶೋಕಪುರಂ – ಕೆ.ಎಸ್.ಆರ್ ಬೆಂಗಳೂರು) ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 2ರ ವರೆಗೆ ಸಂಜೆ 4 ಗಂಟೆಗೆ ಪ್ರಾರಂಭವಾಗಿ ಅದೇ ದಿನ ಸಂಜೆ 7:20ಕ್ಕೆ ಕೆ.ಎಸ್.ಆರ್ ಬೆಂಗಳೂರು ತಲುಪಲಿದೆ.
- ರೈಲು ಸಂಖ್ಯೆ 06287 (ಕೆ.ಎಸ್.ಆರ್ ಬೆಂಗಳೂರು – ಮೈಸೂರು) ಇದು ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 2ರ ವರೆಗೆ ಸಂಜೆ 7:45 ಕ್ಕೆ ಹೊರಟು ಅದೇ ದಿನ ರಾತ್ರಿ 10:40 ಕ್ಕೆ ಮೈಸೂರು ತಲುಪುತ್ತದೆ.
- ರೈಲು ಸಂಖ್ಯೆ 06288 (ಮೈಸೂರು – ಎಸ್.ಎಂ.ವಿ.ಟಿ ಬೆಂಗಳೂರು) ಈ ರೈಲು ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 2ರ ವರೆಗೆ ರಾತ್ರಿ 10:55 ಕ್ಕೆ ಮೈಸೂರಿನಿಂದ ಹೊರಟು ಮರುದಿನ ಬೆಳಿಗ್ಗೆ 03:30 ಕ್ಕೆ ಎಸ್.ಎಂ.ವಿ.ಟಿ ಬೆಂಗಳೂರು ತಲುಪುತ್ತದೆ.
ಈ ಎಲ್ಲಾ ವಿಶೇಷ ಮೆಮು ರೈಲುಗಳು 8 ಬೋಗಿಗಳ ಒಳಗೊಂಡಿರುತ್ತವೆ, ಇದು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಸೌಕರ್ಯ ಒದಗಿಸುತ್ತದೆ.
ಹೆಚ್ಚಿನ ಮಾಹಿತಿಗೆ ಪ್ರಯಾಣಿಕರು ರೈಲುಗಳ ಸಮಯ, ನಿಲುಗಡೆಗಳು ಮತ್ತು ಇತರ ವಿವರಗಳಿಗಾಗಿ ಅಧಿಕೃತ ವೆಬ್‌ಸೈಟ್ www.enquiry.indianrail.gov.in ಗೆ ಭೇಟಿ ನೀಡಬಹುದು. ಅಲ್ಲದೆ, NTES ಅಪ್ಲಿಕೇಶನ್ ಬಳಸಬಹುದು ಅಥವಾ 139 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.