ಮಳವಳ್ಳಿ: ಮಹಿಳೆ ಬಸ್ ಹತ್ತುವ ವೇಳೆ ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಚೈನ್ ಕಳವು.

2
17

ಮಳವಳ್ಳಿ: ವಾರದ ಸಂತೆಯಲ್ಲಿ ತರಕಾರಿ ಖರೀದಿಸಿ ಮನೆಗೆ ಮರಳುತ್ತಿದ್ದ ಮಹಿಳೆಯೊಬ್ಬರಿಗೆ ಬಸ್ ಹತ್ತುವ ವೇಳೆ ಕಳ್ಳರು ಶಾಕ್ ನೀಡಿದ್ದಾರೆ. ಜನದಟ್ಟಣೆಯ ಲಾಭ ಪಡೆದ ದುಷ್ಕರ್ಮಿಗಳು, ಮಹಿಳೆಯ ಕತ್ತಿನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕ್ಷಣಾರ್ಧದಲ್ಲಿ ಕಸಿದು ಪರಾರಿಯಾಗಿರುವ ಘಟನೆ ತಾಲೂಕಿನ ಹಲಗೂರು ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಬ್ಯಾಡರಹಳ್ಳಿ ಗ್ರಾಮದ ನಿವಾಸಿ ಪುಟ್ಟಸಿದ್ದಮ್ಮ ಅವರೇ ಚಿನ್ನದ ಸರ ಕಳೆದುಕೊಂಡವರು. ಎಂದಿನಂತೆ ಹಲಗೂರಿನಲ್ಲಿ ನಡೆಯುವ ವಾರದ ಸಂತೆಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಂದು, ಮನೆಗೆ ಬೇಕಾದ ತರಕಾರಿಗಳನ್ನು ಖರೀದಿಸಿದ್ದಾರೆ. ನಂತರ, ತಮ್ಮ ಗ್ರಾಮಕ್ಕೆ ವಾಪಸ್ ಹೋಗಲು ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು.

ಬಸ್ ಬಂದಾಗ, ಜನದಟ್ಟಣೆಯ ನಡುವೆ ಬಸ್ ಹತ್ತಲು ಯತ್ನಿಸುತ್ತಿದ್ದಾಗ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಬಸ್ ಹತ್ತಿ ಸೀಟಿನಲ್ಲಿ ಕುಳಿತುಕೊಂಡ ನಂತರ ಪುಟ್ಟಸಿದ್ದಮ್ಮ ತಮ್ಮ ಕತ್ತನ್ನು ಮುಟ್ಟಿ ನೋಡಿಕೊಂಡಾಗ ಚಿನ್ನದ ಸರ ಇಲ್ಲದಿರುವುದು ಅರಿವಿಗೆ ಬಂದಿದೆ. ಇದರಿಂದ ಗಾಬರಿಗೊಂಡ ಅವರು ತಕ್ಷಣವೇ ಕೂಗಿಕೊಂಡಿದ್ದಾರೆ.

ಕಳುವಾದ ಚಿನ್ನದ ಸರವು ಸುಮಾರು 40 ಗ್ರಾಂ ತೂಕವಿದ್ದು, ಅದರ ಅಂದಾಜು ಮೌಲ್ಯ ರೂ. 3,20 ಸಾವಿರ ಎಂದು ಹೇಳಲಾಗಿದೆ. ತಕ್ಷಣವೇ ಬಸ್‌ನಿಂದ ಇಳಿದ ಪುಟ್ಟಸಿದ್ದಮ್ಮ, ಈ ಬಗ್ಗೆ ಹಲಗೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಕಳ್ಳರನ್ನು ಶೀಘ್ರವಾಗಿ ಪತ್ತೆಹಚ್ಚಿ, ತಮಗೆ ಸೇರಿದ ಚಿನ್ನದ ಸರವನ್ನು ಕೊಡಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಈ ಸಂಬಂಧ  ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Previous articleದೇವರಾಜ ಅರಸರ ಪ್ರತಿಮೆ ಅನಾವರಣಕ್ಕೆ ನ.1ರ ಗಡುವು: ವಿಜಯೇಂದ್ರ
Next articleಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್. ನರಸ ರೆಡ್ಡಿ ನಿಧನ

2 COMMENTS

  1. Магаз ровный, сам лично несколько раз здесь заказывал и все доходило вовремя и целостно!:) Наврятли он решится на такое.. https://foxst.ru с нашими кристаллами восстановятся

  2. Фабрика VERESK превращает дворы и дома в пространства активного детства: шведские стенки, уличные комплексы со скалодромами, «качели-гнездо» и маты — всё продумано инженерами и проверено временем. Современное производство в Курске, быстрая отгрузка по России и индивидуальные решения по ротационному формованию делают выбор очевидным. Загляните на https://rdk.ru/ — в каталоге «хиты продаж» и новинки с усиленными горками Roto Mold. Безопасность, прочность и вдохновляющий дизайн здесь идут рука об руку.

LEAVE A REPLY

Please enter your comment!
Please enter your name here