ಕೊಡಗು: ಕೆಲಸ ಖಾಲಿ ಇದೆ, ವೇತನ 15,000 ರೂ.ಗಳು

0
24

ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 22ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯಲ್ಲಿ ನೇರಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ

1. ಎಂ.ಬಿ.ಬಿ.ಎಸ್ ವೈದ್ಯರು:- ಹುದ್ದೆ: =4, [ಸಂಚಾರಿ ಆರೋಗ್ಯ ಘಟಕ -3, ನಮ್ಮ ಕ್ಲಿನಿಕ್-1] ಮೀಸಲಾತಿ: ಪ.ಜಾತಿ (ಪ್ರವರ್ಗ ಎ) ಸಾಮಾನ್ಯ-1, ಸಾಮಾನ್ಯದಲ್ಲಿ ಸಾಮಾನ್ಯ- 1, ಮಹಿಳೆ-1, ಪ.ಪಂಗಡೆ ಸಾಮಾನ್ಯ-1 ವಿದ್ಯಾರ್ಹತೆ: ಎಂ.ಬಿ.ಬಿ.ಎಸ್ & ವಿಶ್ವ 2 2 Convocation/Degree certificate ໖, ಎಂದಿದ್ದು, ದಿದ್ದು, ಕೆ.ಎಂ.ಸಿ ನೋಂದಣಿಯಾಗಿರತಕ್ಕದ್ದು, ವೇತನ: ರೂ.75,000/-, ವಯೋಮಿತಿ: ಸಂಚಾರಿ ಆರೋಗ್ಯ ಘಟಕ- <65, ನಮ್ಮ ಕ್ಲಿನಿಕ್<45 ವರ್ಷ, ಅನುಭವ [ಸಂಚಾರಿ ಆರೋಗ್ಯ ಘಟಕ): ಕನಿಷ್ಠ ಎರಡು ವರ್ಷದ ಸೇವೆ ಸಲ್ಲಿಸಿರುವ ಅನುಭವ ಹೊಂದಿರಬೇಕು.

2. ಶುಶೂಷಕ ಅಧಿಕಾರಿ: ಹುದ್ದೆ: =6, [NPPC-1, BLOOD BANK-1, MHU-4], ಮೀಸಲಾತಿ: ಸಾಮಾನ್ಯದಲ್ಲಿ ಮಾಜಿ ಸೈನಿಕ- 1 ಹುದ್ದೆ, ಪ.ಜಾತಿ ಪ್ರವರ್ಗ (ಎ) ಸಾಮಾನ್ಯ-1 ಸಾಮಾನ್ಯ ಮಹಿಳೆ-1, ಸಾಮಾನ್ಯ ಗ್ರಾಮೀಣ-1, ಪ.ಜಾತಿ ಪ್ರವರ್ಗ (ಬಿ) ಸಾಮಾನ್ಯ -1, 2ಎ ಅಂಗವಿಕಲ-1.

ವಿದ್ಯಾರ್ಹತೆ: NPPC-1 ಜಿ.ಎನ್.ಎಂ ನಸಿರ್ಂಗ್ ಅನುಭವ (NPPC) ಶುಶೂಷಕ ಅಧಿಕಾರಿ ಹುದ್ದೆಗೆ ಸಾರ್ವಜನಿಕ ಆರೋಗ್ಯ ಮತ್ತು ಸರಕಾರದ ಆರೋಗ್ಯ ಕಾರ್ಯಕ್ರಮದಲ್ಲಿ 1 ವರ್ಷದ ಅನುಭವ. ಕೆ ಎನ್ ಸಿ ನೋಂದಣಿಯಾಗಿರತಕ್ಕದ್ದು, ವೇತನ: ರೂ.15555/- ವಯೋಮಿತಿ: <40 ವರ್ಷ.

BLOOD BANK-1 ಬಿ.ಎಸ್ಸಿ ನಸಿರ್ಂಗ್/ಜಿ.ಎನ್.ಎಂ ನಸಿರ್ಂಗ್, 1. ಸ್ಥಳೀಯರಿಗೆ ಆದ್ಯತೆ ಮೇರೆಗೆ ನೇಮಕಾತಿ ಮಾಡುವುದು. 2. ಕನ್ನಡ ಭಾಷಾಜ್ಞಾನ ಹೊಂದಿರತಕ್ಕ ಅಭ್ಯರ್ಥಿಗಳಿಗೆ ಆದ್ಯತೆ ನೀಡುವುದು. 3. ಕಂಪ್ಯೂಟರ್ ಜ್ಞಾನ (ಇಂಟರ್ನೆಟ್ ಬ್ರೌಸಿಂಗ್ ಇ-ಮೇಲ್ ಎಂ ಎಸ್ ಆಫೀಸ್) ಪರಿಣಿತಿ ಹೊಂದಿರಬೇಕು. 4. ಬಿ.ಎಸ್.ಸಿ ನರ್ಸಿಂಗ್ ಪದವಿ ಆದವರಿಗೆ ಮೊದಲ ಆದ್ಯತೆ ನೀಡುವುದು ಒಂದು ವೇಳೆ ಬಿ.ಎಸ್.ಸಿ ನರ್ಸಿಂಗ್ ಪದವಿ ಆದವರು ದೊರೆಯದೆ ಇದ್ದಲ್ಲಿ ಜಿ.ಎನ್.ಎಂ ಆದವರಿಗೆ ನೀಡುವುದು. ವೇತನ: ರೂ.15,555/-, ವಯೋಮಿತಿ: <40 ವರ್ಷ. ಕೆ ಎನ್ ಸಿ ನೋಂದಣಿಯಾಗಿರತಕ್ಕದ್ದು,

ಸಂಚಾರಿ ಆರೋಗ್ಯ ಘಟಕ – 4: ಜಿ.ಎನ್.ಎಂ ನರ್ಸಿಂಗ್/ ಬಿ.ಎಸ್ಸಿ ನರ್ಸಿಂಗ್, ಕೆ ಎನ್ ಸಿ ನೋಂದಣಿಯಾಗಿರತಕ್ಕದ್ದು, ಅವಧಿ ಮುಗಿದು ಹೋಗಿದ್ದರೆ ನವೀಕರಣಗೊಂಡಿರಬೇಕು. ಸಂಚಾರಿ ಆರೋಗ್ಯ ಘಟಕ ಶುಶೂಷಕ ಅಧಿಕಾರಿ ಹುದ್ದೆಗೆ ಕನಿಷ್ಟ 2 ವರ್ಷಗಳ ಸೇವೆ ಸಲ್ಲಿಸಿರುವ ಅನುಭವವನ್ನು ಹೊಂದಿರಬೇಕು. ವಯೋಮಿತಿ: <45 ವರ್ಷ, ವೇತನ: 20.15,555/-

3. ಕಿರಿಯ ಪ್ರಯೋಗಶಾಲಾ ತಂತ್ರಜ್ಞಧಿಕಾರಿ: ಹುದ್ದೆ: =5 [ಸಂಚಾರಿ ಆರೋಗ್ಯ ಘಟಕ-4, ನಮ್ಮ ಕ್ಲಿನಿಕ್-1], ಮೀಸಲಾತಿ: ಸಾಮಾನ್ಯದಲ್ಲಿ ಮಹಿಳೆ-1, ಗ್ರಾಮೀಣ-1, ಪ.ಪಂಗಡ ಸಾಮಾನ್ಯ-1, 2ಎ ಸಾಮಾನ್ಯ-1 ಪ್ರವರ್ಗ-1 ಸಾಮಾನ್ಯ-1 ವೇತನ: 15,555/-, ವಯೋಮಿತಿ: <45 ವರ್ಷ, ವಿದ್ಯಾರ್ಹತೆ: ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯು ನಡೆಸುವ ಪ್ರಯೋಗಶಾಲಾ ತಂತ್ರಜ್ಞತೆಯ ಮೂರು ವರ್ಷದ ಡಿಪ್ಲೋಮಾ ಕೋರ್ಸ್ ಉತ್ತೀರ್ಣವಾಗಿರಬೇಕು. ಅಥವಾ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ಉತ್ತೀರ್ಣದೊಂದಿಗೆ ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯು ನಡೆಸುವ ಪ್ರಯೋಗಶಾಲಾ ತಂತ್ರಜ್ಞತೆಯ ಎರಡು ವರ್ಷದ ಡಿಪ್ಲೋಮಾ ಕೋರ್ಸ್ ಉತ್ತೀರ್ಣವಾಗಿರಬೇಕು ಕಡ್ಡಾಯವಾಗಿ ಆರೆ ವೈದ್ಯಕೀಯ ಮಂಡಳಿಯಲ್ಲಿ ನೋಂದಾಣಿಯಾಗಿರಬೇಕು.ಅರ್ಜಿ ಸಲ್ಲಿಸುವ

ಸೂಚನೆ: ದಿನಾಂಕ ಸೆ. 22 ರಂದು ಪೂರ್ವಾಹ್ನ 10:00 ಯಿಂದ 12:00ರ ವರೆಗೆ ಅರ್ಜಿ ವಿತರಿಸಲಾಗುವುದು, ನಂತರ ಬಂದವರನ್ನು ಪರಿಗಣಿಸಲಾಗುವುದಿಲ್ಲ. ಎಲ್ಲಾ ಮೂಲ ದಾಖಲಾತಿಗಳು ಮತ್ತು ಒಂದು ದೃಢೀಕೃತ ನಕಲು ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗುವುದು. ನೇರ ಸಂದರ್ಶನವನ್ನು ಅದೇ ದಿನ ಅಪರಾಹ್ನ 12.00 ಗಂಟೆಯ ನಂತರ ನಡೆಸಲಾಗುವುದು.

1. ಹುದ್ದೆ ತಕ್ಕಂತ ವಿದ್ಯಾರ್ಹತೆ ಇಲ್ಲದವರನ್ನು, ಮೂಲ ದಾಖಲಾತಿಗಳು ಇಲ್ಲದವರನ್ನು ಹಾಗೂ ಅನುಭವಕ್ಕೆ ಆದ್ಯತೆ ಹುದ್ದೆಗಳಲ್ಲಿ ಸದರಿ ಹುದ್ದೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಸವಿಲ್ಲದವರನ್ನು ಆಯ್ಕೆಗೆ ಕಡ್ಡಾಯವಾಗಿ ಪರಿಗಣಿಸಲಾಗುವುದಿಲ್ಲ. ಆಯ್ಕೆ ಸಮಿತಿಯ ನಿರ್ಣಯ ಅಂತಿಮವಾಗಿರುತ್ತದೆ.

2. ಶುಶೂಷಕ ಅಧಿಕಾರಿ ಹುದ್ದೆಗೆ KNC ನೋಂದಣಿ ಆಗಿರಬೇಕು/ಅರ್ಜಿ ಸಲ್ಲಿಸುವ ವೇಳೆಯಲ್ಲಿ ನವೀಕೃತಗೊಂಡು ಚಾಲ್ತಿಯಲ್ಲಿ ಇರಬೇಕು.

3. ಈ ನೇಮಕಾತಿಯು ಎನ್.ಹೆಚ್.ಎಂ / ರಾಜ್ಯ ವಲಯದ ನಿಯಮಾವಳಿ, ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.

4. ಮೀಸಲಾತಿ ಅನ್ವಯವಾಗುವ ಹುದ್ದೆಗಳಲ್ಲಿ ಮೀಸಲಾತಿ ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಜಾತಿ ದೃಢೀಕರಣ ಪತ್ರ ಹಾಜರುಪಡಿಸುವುದು. ಜಾತಿ ದೃಢೀಕರಣ ಪತ್ರ ಪ್ರಸ್ತುತ ಚಾಲ್ತಿಯಲ್ಲಿ ಇರಬೇಕು. ಚಾಲ್ತಿಯಲ್ಲಿ ಇಲ್ಲದಿದ್ದಲ್ಲಿ ಸಾಮಾನ್ಯ ವರ್ಗ ಎಂದು ಪರಿಗಣಿಸಲಾಗುವುದು.

5. ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ NHM ಅಭ್ಯರ್ಥಿಗಳು ಸಂಬಂಧಿಸಿದ ಹುದ್ದೆಗಳಿಗೆ ಅರ್ಜಿಸಲ್ಲಿಸಬೇಕಾದರೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗೆ ರಾಜಿನಾಮೆ ನೀಡಿರಬೇಕು.

6. ಸ್ಥಳ ಆಯ್ಕೆಯನ್ನು ಸಂದರ್ಶನದ ಮೂಲಕ ನಡೆಸಲಾಗುವುದು.

7. ವೈದ್ಯರು ಕಛೇರಿ ಅವಧಿಯ ಯಾವುದೇ ಸಮಯ ಅರ್ಜಿ ಸಲ್ಲಿಸಬಹುದು. ಇದು ವೈದ್ಯರ ಹುದ್ದೆ ಭರ್ತಿಯಾಗುವ ತನಕ ನಿತ್ಯ ನೇರ ಸಂದರ್ಶನಕ್ಕೆ ಅವಕಾಶವಿರುತ್ತದೆ. ವೈದ್ಯರ ಸೇವೆ ತುರ್ತು ಅವಶ್ಯಕತೆ ಇರುವುದರಿಂದ ಮೀಸಲಾತಿಗೆ ತಕ್ಕಷ್ಟು ಅರ್ಜಿ ಬಾರದೇ ಇದ್ದಲ್ಲಿ ಇತರೆ ಅಭ್ಯರ್ಥಿಗಳ ಅರ್ಜಿಯನ್ನು ಪರಿಗಣಿಸಲಾಗುವುದು.

ಆಯ್ಕೆವಿಧಾನ: ಆಸಕ್ತ ಅಭ್ಯರ್ಥಿಗಳು ನಿಗದಿತ ಸಮಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಕೊಡಗು ಇಲ್ಲಿ ನೇರಸಂದರ್ಶನಕ್ಕೆ ಸೆಪ್ಟೆಂಬರ್ 22ರಂದು ಬೆಳಗ್ಗೆ 10 ಗಂಟೆಗೆ ಹಾಜರಿರಬೇಕು.

ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಅಥವಾ 08272-295457 ಸಂಖ್ಯೆಗೆ ಕರೆ ಮಾಡಿ. ಈ ನೇಮಕಾತಿ ಜಿಲ್ಲೆಯ ಆರೋಗ್ಯ ಸೇವೆಗಳನ್ನು ಸುಧಾರಿಸಲು ಮಹತ್ವದ ಹೆಜ್ಜೆಯಾಗಿದೆ. ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಕೋರಲಾಗಿದೆ.

Previous articleರಾಮನಗರ, ಚನ್ನಪಟ್ಟಣಕ್ಕೂ ಬಿಎಂಟಿಸಿ ಬಸ್‌
Next articleMUDA Scam: ಮುಡಾ ಮಾಜಿ ಆಯುಕ್ತ ದಿನೇಶ್ ಬಂಧನ

LEAVE A REPLY

Please enter your comment!
Please enter your name here